ನ್ಯೂಸ್ ನಾಟೌ ಟ್: ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಾಹಿತಿ ಮತ್ತು ಅಧ್ಯಾಪಕ ಇಬ್ರಾಹೀಂ ಬೇವಿಂಜ (69) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಮೂಲತಃ ಅಬ್ದುಲ್ಲಾ ಕುಂಞಿ ಮುಸ್ಲಿಯಾರ್ ಮತ್ತು ಚೆಂಬರಿಕ ಉಮ್ಮಾಲಿಮ್ಮ ದಂಪತಿಯ ಪುತ್ರ.: ಇವರು ಕಾಸರಕೋಡಿನ ಚೆರ್ಕಳ ಬೇವಿಂಜ ನೀವಾಸಿಯಾಗಿದ್ದು ಕಾಸರಗೋಡು ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪದವಿ ಪಡೆದ ಇಬ್ರಾಹೀಂ ಅವರು, ಬಳಿಕ ಪಟ್ಟಾಂಬಿ ಸಂಸ್ಕೃತ ಕಾಲೇಜಿನಲ್ಲಿ ಮಲಯಾಳಂನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು .
ಕೋಝಿಕ್ಕೋಡ್ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಪೂರ್ತಿಗೊಳಿಸಿದ ಅವರು, 1980-81ರ ಅವಧಿಯಲ್ಲಿ ಚಂದ್ರಿಕಾ ದಿನಪತ್ರಿಕೆಯ ಸಹ ಸಂಪಾದಕರಾಗಿದ್ದರು. ಮಲಯಾಳಂನಲ್ಲಿ ಇಸ್ಲಾಮಿಕ್ ಸಾಹಿತ್ಯ, ಮಲಯಾಳಂನಲ್ಲಿ ಮುಸ್ಲಿಂ ಸಾಮಾಜಿಕ ಜೀವನದ ಉಬೈದ್ , ಪಿ. ಕುಂಞಿ ರಾಮನ್ ನಾಯರುಡೆ ಕತ್ತುನ್ನ ಅಂಬಲಂ, ಖುರ್ ಆನುಂ ಬಸಹೇರುಂ ಪ್ರಮುಖ ಮಲಯಾಳಂ ಕೃತಿಗಳನ್ನು ಬರೆದಿದ್ದಾರೆ.