ನ್ಯೂಸ್ ನಾಟೌಟ್ : ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಈ ನಿರ್ಧಾರ ಯಾಕೆ ತೆಗೆದುಕೊಳ್ಳುತ್ತಾರೆ ಅನ್ನೋದೇ ಪ್ರಶ್ನಾರ್ಥ ಚಿಹ್ನೆಯಾಗಿದೆ.ತಾಯಿ ಬೈದಳೆಂದು ಅಥವಾ ತಾಯಿ ಮೊಬೈಲ್ನಲ್ಲಿ ಗೇಮ್ ಆಡಬೇಡ ಎಂದಿರುವುಕ್ಕೆ ಜೀವನವನ್ನೇ ಕೊನೆಗಾಣಿಸುವ ನಿರ್ಧಾರ ತಲುಪುದು ವಿಪರ್ಯಾಸ..!
ಇಲ್ಲೊಬ್ಬ 9ನೇ ತರಗತಿ ವಿದ್ಯಾರ್ಥಿ ಹಾಸ್ಟೆಲ್ನಲ್ಲಿ (Hostel Student) ದುರಂತ ಅಂತ್ಯ ಕಂಡ ಘಟನೆ ವರದಿಯಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆ ಕೊಪ್ಪ ಪಟ್ಟಣದ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ.9ನೇ ತಗರತಿ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸ್ (15) ಇನ್ನಿಲ್ಲವಾದ ಬಾಲಕ.
ಬಾಲಕನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾಲೆಯ 3ನೇ ಮಹಡಿಯಲ್ಲಿದ್ದ ಹಾಸ್ಟೆಲ್ನ ಮೇಲ್ಛಾವಣಿಯ ಕಬ್ಬಿಣದ ರಾಡಿಗೆ ಸೀರೆಯಿಂದ ಬಿಗಿದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಊಟ ಮಾಡಿ ಸ್ನೇಹಿತರ ಜೊತೆಯೇ ಮಲಗಿದ್ದ ಶ್ರೀನಿವಾಸ್ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಮಲಗಿದ್ದಾಗ ಈ ಕೃತ್ಯವೆಸಗಿದ್ದಾನೆ .ಬಾಲಕನ ತಂದೆ ಸರ್ಕಾರಿ ನೌಕರರಾಗಿದ್ದು, ಕೊಪ್ಪ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದರು. ಶಾಲೆ ಮನೆಯಿಂದ ತುಸು ದೂರದಲ್ಲೇ ಇತ್ತು. ಬಾಲಕ ನಿತ್ಯ ಓಡಾಡಿಕೊಂಡಿದ್ದನು. ಕಳೆದ ಒಂದು ತಿಂಗಳ ಹಿಂದೆ ಬಾಲಕನ ತಂದೆಗೆ ಕೊಪ್ಪದಿಂದ ಅಜ್ಜಂಪುರಕ್ಕೆ ವರ್ಗಾವಣೆಯಾಗಿತ್ತು. ಹಾಗಾಗಿ, ಬಾಲಕನನ್ನು ಹಾಸ್ಟೆಲ್ಗೆ ಸೇರಿಸಿದ್ದರು.
ಒಂದು ತಿಂಗಳಿನಿಂದ ಶಾಲೆಯ ಹಾಸ್ಟೆಲ್ನಲ್ಲಿದ್ದ ಶ್ರೀನಿವಾಸ್ ಮಂಗಳವಾರ ಬೆಳಗ್ಗಿನ ಜಾವ ಹಾಸ್ಟೆಲ್ನಲ್ಲಿಯೇ ಈ ಕೃತ್ಯವೆಸಗಿದ್ದು,ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.