ನ್ಯೂಸ್ ನಾಟೌಟ್ : ಗುತ್ತಿಗಾರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿಯ ಸುಮಿತ್ರಾ ಮೂಕಮಲೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸಾಲ್ತಾಡಿ ಆಯ್ಕೆಯಾಗಿದ್ದಾರೆ.ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗದ ಮಹಿಳೆಗೆ ಮೀಸಲಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಮಿತ್ರಾ ಮೂಕಮಲೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಿದ್ದು ಬಿಜೆಪಿಯ ಭಾರತಿ ಸಾಲ್ತಾಡಿ ಅವರುಗಳು ಆಯ್ಕೆಯಾಗಿದ್ದಾರೆ.
ಬಿಜೆಪಿಯ 4 ಗ್ರಾ.ಪಂ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ನಿಂತು ಹುಬ್ಬೇರಿಸುವಂತೆ ಮಾಡಿದ್ದಾರೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ನಡೆದಾಗ ಅಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಸುಮಿತ್ರಾ ಮೂಕಮಲೆ 9 ಮತ ಪಡೆದರೆ, ಗ್ರಾಮ ಭಾರತದ ತಂಡದ ಲತಾ ಆಜಡ್ಕ ಅವರು 4 ಮತ ಪಡೆದರು.
ಉಪಾಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಭಾರತಿ ಸಾಲ್ತಾಡಿ 6 ಮತ ಹಾಗೂ ಗ್ರಾಮ ಭಾರತ ತಂಡದ ವಸಂತ ಮೊಗ್ರ 4 ಮತ ಪಡೆದರು. 3 ಮತ ಚಲಾವಣೆ ಆಗಿರಲಿಲ್ಲವೆಂದು ತಿಳಿದು ಬಂದಿದೆ.
ಸುಮಿತ್ರಾ ಅವರನ್ನು ಮಾಯಿಲಪ್ಪ ಕೊಂಬೆಟ್ಟು ಸೂಚಿಸಿದರು. ಭಾರತಿ ಅವರನ್ನು ವೆಂಕಟ್ ವಳಲಂಬೆ ಸೂಚಿಸಿದರು. ಲತಾ ಆಜಡ್ಕ ಅವರನ್ನು ಎಂ.ಕೆ ಶಾರದಾ ಸೂಚಿಸಿದರೆ, ವಸಂತ ಅವರನ್ನು ಲತಾ ಆಜಡ್ಕ ಸೂಚಿಸಿದರು.