ನ್ಯೂಸ್ ನಾಟೌಟ್ :ಮಧ್ಯಪ್ರದೇಶದ ವಿದಿಶಾದಲ್ಲಿ (khandwa, Madhya pradesh) ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆಯೊಂದು ನಡೆದಿದೆ. ಮಗು – ತಾಯಿ ಆರೋಗ್ಯವಾಗಿದ್ದಾರೆ. ಆದರೆ ವೈದ್ಯರು ಬಾಲಕಿಯನ್ನು ಉತ್ತಮ ಚಿಕಿತ್ಸೆಗಾಗಿ ಭೋಪಾಲ್ಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.ಬಾಲಕಿಯ ಕುಟುಂಬ ಕುರ್ವಾಯಿ ತಹಸಿಲ್ನ ಜೋನಖೇಡಿ ಗ್ರಾಮದ ನಿವಾಸಿಗಳಾಗಿದ್ದು, ತಾಯಿಯ ಹೆಸರು ಧನುಷ್ ಬಾಯಿ ಮತ್ತು ತಂದೆಯ ಹೆಸರು ಫೂಲ್ ಸಿಂಗ್ ಪ್ರಜಾಪತಿ. ಬಮೋರಾ ಸರ್ಕಾರಿ ಆಸ್ಪತ್ರೆಯಲ್ಲಿ ಧನುಷ್ ಬಾಯಿ ಈ ಮಗುವಿಗೆ ಜನ್ಮ ನೀಡಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಈ ರೀತಿಯ (rare) ಪ್ರಕರಣವನ್ನು ವೈದ್ಯಕೀಯ ಭಾಷೆಯಲ್ಲಿ ‘ಈಸಿಯೋಪಾಗಸ್’ ಎಂದು ಕರೆಯಲಾಗುತ್ತದೆ. ಸಾವಿರಾರು ಜನರಲ್ಲಿ ಒಬ್ಬರು ಮಾತ್ರ ಹೀಗೆ ಹುಟ್ಟುತ್ತಾರೆ ಎಂದು ಹೇಳಲಾಗುತ್ತದೆ.. ಅದರ ಪ್ರಕಾರ ಮಗುವಿನಲ್ಲಿ ಈ ರೀತಿಯಾಗಿ ಹೆಚ್ಚುವರಿ ಅಂಗಗಳು ಬೆಳೆಯುತ್ತವೆ ಎಂದಿದ್ದಾರೆ. ನವಜಾತ ಶಿಶುವಿಗೆ ದೈಹಿಕ ನ್ಯೂನತೆ ಇದೆ. ಗರ್ಭದಲ್ಲಿ ಬೆಳೆಯುತ್ತಿರುವಾಗಲೇ ಮಗುವಿನ ದೇಹದ ಕೆಳಗಿನ ಭಾಗದ ಹೆಚ್ಚುವರಿ ಬೆಳವಣಿಗೆಯಿಂದ ಇದು ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಮೂವರು ಹೆಣ್ಣು ಮಕ್ಕಳ ಪೋಷಕರಾಗಿರುವ ಹಾಗೂ ಕೂಲಿ ಕೆಲಸ ಮಾಡುತ್ತಿರುವ ಬಾಲಕಿಯ ತಂದೆ ಫೂಲ್ ಸಿಂಗ್ ಪ್ರಜಾಪತಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ದಿಶಾಖಾ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇಬ್ಬರು ಅವಳಿ ಮಕ್ಕಳಿಗೆ ಎರಡು ವರ್ಷ. ಈ ಕುಟುಂಬದ ಜತೆ ಬಳಿ ಪಡಿತರ ಚೀಟಿ ಇಲ್ಲ. ಆಯುಷ್ಮಾನ್ ಕಾರ್ಡ್ ಇಲ್ಲ. ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ನವಜಾತ ಶಿಶು ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಬಾಲಕಿಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಪಂಚಾಯತ್ ಸಿಇಒ ಶಿವರಾಜ್ ಸಿಂಗ್ ಅಹಿರ್ವಾರ್, ಬಾಲಕಿಯ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.