ನ್ಯೂಸ್ ನಾಟೌಟ್ : ಓಣಂ ಹಾಗೂ ರಕ್ಷಾ ಬಂಧನದ ಸಂಭ್ರಮದಲ್ಲಿರುವ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿ ಕೊಡುವುದಕ್ಕೆ ಎಲ್ಲ ತಯಾರಿ ನಡೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಇದು ಯಾವ ಸಿಹಿ ಸುದ್ದಿ ಅನ್ನುವ ಕುತೂಹಲ ಸಹಜವಾಗಿಯೇ ಮೂಡುತ್ತದೆ.
ಹೌದು, ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಓಣಂ ಹಾಗೂ ರಕ್ಷಾಬಂಧನಕ್ಕೆ ಸಿಹಿ ಸುದ್ದಿ ಘೋಷಿಸುವ ಉತ್ಸಾಹದಲ್ಲಿದ್ದಾರೆ ಎನ್ನಲಾಗಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಆಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಮುಂದಿನ 24 ಗಂಟೆಯಲ್ಲಿ ಎಲ್ಪಿಜಿ ಬೆಲೆ ಇಳಿಕೆ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲೇ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಗೆ ಮುಂದಾಗಿದೆ. ಇತ್ತೀಚೆನ ಚುನಾವಣೆಗಳಲ್ಲಿ ಬೆಲೆ ಏರಿಕೆಯು ಪ್ರಮುಖ ವಿಷಯವಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ನಿರ್ಧಾರವನ್ನು ಖಚಿತಪಡಿಸುವ ಸಾಧ್ಯತೆಯಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಈ ದರ ಇಳಿಕೆ ಅನ್ವಯ ಆಗಲಿದೆ. ಉಜ್ವಲ ಯೋಜನೆಯ LPG ಬೆಲೆಯಲ್ಲಿ 200 ರೂಪಾಯಿ ಇಳಿಕೆ ಆಗುತ್ತದೆ ಎನ್ನಲಾಗಿದೆ.