ನ್ಯೂಸ್ ನಾಟೌಟ್ : ಮಂಗಳೂರಿನವರಿಗೊಂದು ಶುಭ ಸುದ್ದಿ ಹಾಗೂ ತುಳುನಾಡಿನ ಜನತೆ ಹೆಮ್ಮೆ ಪಡಬೇಕಾದ ವಿಚಾರ.ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ್ದು,ಈ ಮೂಲಕ ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
‘ಮೊಗವೀರನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ (ಮೊಗವೀರ ಸಮುದಾಯದ ಸಾಂಸ್ಕೃತಿಕ ಮತ್ತು ಆರ್ಥಿಕ ಚಿಂತನೆಗಳು)ವಿಷಯದ ಕುರಿತು ಮಂಗಳೂರಿನ ಸಸಿಹಿತ್ಲುವಿನ ಡಾ.ವಿ.ಕೆ.ಯಾದವ್ ಅವರು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ತಮ್ಮ ಪಿಹೆಚ್ ಡಿ ಪೂರ್ಣಗೊಳಿಸಿದ್ದು ಹೆಮ್ಮೆಯ ವಿಚಾರ.
ಪುಸ್ತಕ ರೂಪದಲ್ಲಿ ಹೊರತಂದಿರುವ ಇವರ ಪ್ರಬಂಧವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ ಎಂ ಮೋಹನ್ ಆಳ್ವ ಅವರು ಆಗಸ್ಟ್ 27 ರಂದು ಅನಾವರಣಗೊಳಿಸಲಿದ್ದಾರೆ. ವಿಶ್ವವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಪದವಿ ಗಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸಂಗೀತಾ ಅವರು ತುಳುವಿನಲ್ಲಿ ಪಿಹೆಚ್ ಡಿ ಮಾಡಿದ್ದರು, ಆದರೆ ಅದು ಪ್ರಕಟವಾಗಿರಲಿಲ್ಲ.ಹೀಗಾಗಿ ಈ ಸಂಶೋಧನಾ ಅಧ್ಯಯನ ಭಾರಿ ಮಹತ್ವವನ್ನು ಪಡೆದುಕೊಳ್ಳುತ್ತಿದೆ.
ತುಳುವಿನಲ್ಲಿ ಪ್ರಕಟವಾದ ಮೊದಲ ಪಿಹೆಚ್ಡಿ ಪ್ರಬಂಧ ಇದಾಗಿದ್ದು,ಖುಷಿ ತಂದಿದೆ ಎಂದು ಹೇಳಿದ ಯಾದವ್ ಹೇಳಿದ್ದಾರೆ. ತುಳು ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನೆ ಮಾಡುವವರಿಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಿದರು. ಪ್ರಸ್ತುತ, ದ್ರಾವಿಡ ವಿಶ್ವವಿದ್ಯಾಲಯ ಮಾತ್ರ ಇತರ ದ್ರಾವಿಡ ಭಾಷೆಗಳ ಜೊತೆಗೆ ತುಳು ಭಾಷೆಯಲ್ಲಿ ಪಿಹೆಚ್ ಡಿ ಮಾಡಲು ಅವಕಾಶ ನೀಡುತ್ತದೆ ಎಂದು ಲೇಖಕ ಚಂದ್ರಹಾಸ ಕಣಂತೂರು ಹೇಳಿದರು.
ತುಳು ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಜಿ.ಅಮ್ಮಣ್ಣ ಅವರು ಮಾತನಾಡುತ್ತಾ, ತುಳು ಭಾಷೆ ಮತ್ತು ಸಾಹಿತ್ಯದ ಇತಿಹಾಸದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ, ವಿಶೇಷವಾಗಿ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಅಧ್ಯಯನ ಮತ್ತು ಸಾಹಿತ್ಯದ ಕೊರತೆಯನ್ನು ಉಲ್ಲೇಖಿಸಿ ಪ್ರಕಟಿಸಲಾಗಿದೆ.ಪುಸ್ತಕ ಬಿಡುಗಡೆಗೂ ಮುನ್ನ ತುಳು ಕವಿಗೋಷ್ಠಿ ನಡೆಯಲಿದ್ದು 12 ಜನ ಭರವಸೆಯ ಕವಿಗಳು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.