ನ್ಯೂಸ್ ನಾಟೌಟ್: ಕನಕಪುರ ಪಟ್ಟಣದಲ್ಲಿರುವ ಕೆಂಕೇರಮ್ಮ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ಅರ್ಚಕರು ಊಟಕ್ಕೆ ಹೋಗಿದ್ದಾಗ ದೇವಿಯ ಮೈಮೇಲೆ ಇದ್ದ 8 ಗ್ರಾಂ ತೂಕ ಚಿನ್ನದ ತಾಳಿ ಹಾಗೂ 50 ಗ್ರಾಂ ನಷ್ಟು ಬೆಳ್ಳಿ ಆಭರಣಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆದೇವರಾದ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ ಎಂದು ವರದಿ ತಿಳಿಸಿದೆ.
ಕೂಡಲೇ ಕಳ್ಳನನ್ನ ಬಂಧಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಪ್ರತಿವರ್ಷವೂ ಈ ದೇವಾಲಯದಲ್ಲಿ ಅದ್ಧೂರಿ ಕೊಂಡೋತ್ಸವ ಜರುಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಪ್ರಸಿದ್ಧ ದೇಗುವಾಗಿದೆ. ಅಲ್ಲದೇ ಡಿ.ಕೆ ಶಿವಕುಮಾರ್ ಚುನಾವಣಾ ಸಂದರ್ಭದಲ್ಲಿ ಮತ್ತು ಹಲವು ಬಾರಿ ಕುಟುಂಬ ಸಮೇತ ಆಗಮಿಸಿ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.
ಕಳ್ಳರ ಕೈಚಳಕ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.