ನ್ಯೂಸ್ ನಾಟೌಟ್ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧರಾಗಿದ್ದರು.ಇಡೀ ರಾಜ್ಯವೇ ಈ ಸುದ್ದಿ ಕೇಳಿ ಆಘಾತಕ್ಕೊಳಗಾಗಿತ್ತು.ಈ ನಿಧನ ಸುದ್ದಿಯಿಂದ ಅನೇಕರು ಇನ್ನೂ ಕೂಡ ಹೊರಬರಲಾಗದೇ ಒದ್ದಾಡುತ್ತಿದ್ದಾರೆ.
ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra) ಅವರು ಆಗಸ್ಟ್ 6ರಂದು ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸ್ಪಂದನಾ ಅವರು ಮೃತಪಟ್ಟು ಆಗಸ್ಟ್ 18ಕ್ಕೆ 13 ದಿನಗಳು ಕಳೆದಿವೆ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲ ಸದಸ್ಯರು ದುಃಖ ಸಾಗರದಲ್ಲಿದ್ದಾರೆ.ಇದರ ಮಧ್ಯೆಯೂ ಇದೀಗ ಮೊದಲ ಬಾರಿಗೆ ಎಂಬಂತೆ ವಿಜಯ್ ರಾಘವೇಂದ್ರ (Vijay Raghavendra) ಅವರು ಪತ್ನಿಯನ್ನು ನೆನೆದು ಭಾವುಕರಾಗಿ ಸಾಲುಗಳನ್ನು ಇನ್ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದಾರೆ.
ʻʻಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ, ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ! ನಾನೆಂದೂ ನಿನ್ನವ.. ಕೇವಲ ನಿನ್ನವ” ಹೀಗೆ ವಿಜಯ್ ರಾಘವೇಂದ್ರ ಅವರು (Vijay Raghavendra voice Note) ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.ಈ ಸಾಲುಗಳು ಭಾವನಾತ್ಮಕವಾಗಿ ಹೃದಯವನ್ನು ಸ್ಪರ್ಶಿಸುವಂತಿದೆ.ಇದಕ್ಕೆ ನೂರಾರು ಮಂದಿ ಸಾಂತ್ವನ ಪಡಿಸುವ ಕಾಮೆಂಟ್ ಗಳನ್ನು ಮಾಡಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
https://www.instagram.com/p/CwEl7D4M8Fk/?utm_source=ig_embed&utm_campaign=embed_video_watch_again
ಹೃದಯಾಘಾತದಿಂದ ಮೃತಪಟ್ಟ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra) ಅವರ ಮರಣೋತ್ತರ ಸಂಸ್ಕಾರ ಕ್ರಿಯೆಗಳು ನೆರವೇರಿದವು. ಆಗಸ್ಟ್ 16ರಂದು ಮಲ್ಲೇಶ್ವರಂ ನಿವಾಸದಲ್ಲಿ ಈ ಕಾರ್ಯಕ್ರಮ ನೆರವೇರಿತ್ತು. ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಶಾಂತಿ ಹೋಮದಲ್ಲಿ ವಿಜಯ್ ರಾಘವೇಂದ್ರ ಕುಟುಂಬಸ್ಥರು, ಶಿವ ರಾಜ್ಕುಮಾರ್ (Shiva rajkumar) ದಂಪತಿ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಸೇರಿದಂತೆ ಅನೇಕ ಸಿನಿಮಾ ದಿಗ್ಗಜರು ಪಾಲ್ಗೊಂಡಿದ್ದರು. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಅನು ಪ್ರಭಾಕರ್- ರಘು ಮುಖರ್ಜಿ ದಂಪತಿ, ಲಹರಿ ವೇಲು ಕೂಡ ಭಾಗಿಯಾಗಿದ್ದರು.