ನ್ಯೂಸ್ ನಾಟೌಟ್ : ಮಂಗಳೂರು ಮೀನಿಗೆ ಚಿಕ್ಕಮಗಳೂರಿನಲ್ಲಿ ಗ್ರಾಹಕರು ಮುಗಿಬಿದ್ದಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಯಿಂದ ವರದಿಯಾಗಿದೆ. ಮಂಗಳೂರಿನಿಂದ ಬಂದ ಬರೋಬ್ಬರಿ 340 ಕೆ.ಜಿ. ತೂಕದ ಬೃಹತ್ ಸಮುದ್ರ ಮೀನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ಈ ಮೀನಿನ ಹೆಸರು ಅಂಬೂರು. ಮಂಗಳೂರಿನಿಂದ ಬಂದ ಈ ಮೀನು ಬರೋಬ್ಬರಿ 340 ಕೆ.ಜಿ. ತೂಕ ತೂಗುತ್ತಿದ್ದು, ಈ ಹಿರಿದಾದ ಮೀನು ಕಂಡು ಅಲ್ಲಿನ ಜನ ಸಕತ್ ಖಷ್ ಆಗಿದ್ದಾರೆ. ಮಾತ್ರವಲ್ಲ ಕೆಲವರಂತು ಸೆಲ್ಫಿಗಾಗಿ ಮುಗಿಬಿದ್ದರು.ಇನ್ನೂ ಕೆಲವರು ಇಂತಹ ಚಾನ್ಸ್ ಮತ್ತೊಮ್ಮೆ ಸಿಗಲ್ಲ ಅಂತ ವಿಡಿಯೋ ಮಾಡ್ಕೊಂಡ್ರು. ಅಂತು ನಗರದ ಖಾಸಗಿ ಮೀನು ಅಂಗಡಿಗೆ ಬಂದ ಅಂಬೂರು ಮೀನು ನೋಡಿ ಸ್ಥಳೀಯರಿಗೆ ಖುಷಿಯೋ ಖುಷಿ..
ಈ ಬೃಹತ್ ಗಾತ್ರದ ಮೀನನ್ನು ಇನ್ನೆಲ್ಲೂ ನೋಡಿಲ್ಲವೆಂದು ಅಂಗಡಿ ಬಳಿ ಜನ ಜಾತ್ರೆ ನೆರೆದಿತ್ತು.ಮೊದಲ ಬಾರಿಗೆ ಬೃಹತ್ ಗಾತ್ರದ ಅಂಬೂರು ಮೀನು ತರಿಸಿದ ಖಾಸಗಿ ಮೀನು ಅಂಗಡಿ ಮಾಲೀಕ,1 ಕೆಜಿ ಮೀನಿಗೆ 1000 ಕೊಡ್ತಿವಿ ಅಂದ್ರು ಅಂಬೂರು ಫಿಶ್ ಸಿಗ್ತಿಲ್ಲ ಎನ್ನಲಾಗುತ್ತಿದೆ.
ಅಂಬೂರು ಮೀನಿನ ಮಾಂಸ ಕೊಳ್ಳಲು ಮೀನಿನ ಅಂಗಡಿ ಬಳಿ ಸಾಲುಗಟ್ಟಿ ನಿಂತ ಗ್ರಾಹಕರ ಉತ್ಸಾಹ ನೋಡಿ ಮೀನಿನ ದರ ಅಂಗಡಿ ಮಾಲೀಕರು ಹೆಚ್ಚಿಸಿದರೆಂದು ತಿಳಿದು ಬಂದಿದೆ. ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚಿನ ಬೇಡಿಕೆ ಇದ್ದು, ಚಿಕ್ಕಮಗಳೂರಿನಲ್ಲಿಯೂ ಗ್ರಾಹಕರು ಮುಗಿಬಿದ್ದಿರೋದನ್ನು ಕಂಡಾಗ ನಮ್ಮ ರಾಜ್ಯದಲ್ಲಿಯೂ ಇದಕ್ಕೆ ಬೇಡಿಕೆ ಇದೆ ಎಂದು ತಿಳಿದು ಬರುತ್ತೆ.