ನ್ಯೂಸ್ ನಾಟೌಟ್ : ಪ್ರವಾಸಿಗರೇ ಸ್ವಲ್ಪ ಎಚ್ಚರವಹಿಸಿ. ಟೇಸ್ಟಿ ನಾನ್ವೆಜ್ ಫುಡ್ (Nonveg food) ಐಟಂ ಸಿಗಬಹುದು ಎಂದು ನೀವು ಬಾಯಿ ಚಪ್ಪರಿಸಿಕೊಂಡು ಮಟನ್ ಬಿರಿಯಾನಿ (mutton biryani) ತಿನ್ನಲು ಹೊರಟರೆ ಯಾಮಾರೋದು ಗ್ಯಾರಂಟಿ.ಯಾಕೆಂದ್ರೆ ನಿಮ್ಗೆ ತಿಳಿಯದ ಹಾಗೆ ಬೀಫ್ (beef) ತಿನ್ನಿಸುವವರಿದ್ದಾರೆ! ಹೀಗೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿನ ನಾನ್ ವೆಜ್ ಹೋಟೆಲ್ನಲ್ಲಿ ಕುರಿ ಬದಲು ದನದ ಮಾಂಸ ಬಳಸುತ್ತಿರೋದು ಸಾಕ್ಷಿ ಸಮೇತ ಸಾಬೀತಾಗಿದೆ. ಪೊಲೀಸರು ಅವರನ್ನು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ್ದಾರೆ. ನಾನ್ ವೆಜ್ ಹೋಟೆಲ್ಗಳಲ್ಲಿ ಬೀಫ್ ಮಿಕ್ಸಿಂಗ್ ದಂಧೆ ನಡೆಯುತ್ತಿರುವುದು ಚಿಕ್ಕಮಗಳೂರು ನಗರದ ಹಲವು ಹೋಟೆಲ್ಗಳಲ್ಲಿ ಪತ್ತೆಯಾಗಿದೆ. ಇಂಥ (fraud case) ಈಟರಿಗಳನ್ನು ಕ್ಲೋಸ್ ಮಾಡಿಸಲಾಗಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಎಂಟ್ರಿ ನೀಡಿದ್ದು, ಈ ವೇಳೆ ದನದ ಮಾಂಸದ ಮಿಕ್ಸಿಂಗ್ ದಂಧೆ ಪತ್ತೆಯಾಗಿದೆ. ಕುರಿ ಬಿರಿಯಾನಿಗೆ ದನದ ಮಾಂಸ ಮಿಕ್ಸ್ ಮಾಡಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿದೆ. ಈ ಮೂಲಕ ಮಟನ್ ಬಿರಿಯಾನಿ ಪ್ರಿಯರಿಗೆ ತಿಳಿಯದಂತೆ ಶಾಕ್ ನೀಡಿದ್ದಾರೆ ಕೆಲವು ಹೋಟೆಲ್ ಮಾಲೀಕರು.
ಪ್ರವಾಸಿಗರ ಸ್ವರ್ಗವಾಗಿರುವ ಕಾಫಿನಾಡಿಗೆ ಬರುವ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನಷ್ಟೇ ಅಲ್ಲದೇ ಊಟವನ್ನ ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ನಾನ್ವೆಜ್ ಊಟಕ್ಕೆ ಚಿಕ್ಕಮಗಳೂರಿನಲ್ಲಿ ನಾನ್ವೆಜ್ ಪ್ರಿಯರು ಮುಗಿಬೀಳ್ತಾರೆ. ಆದರೆ, ಎಲ್ಲೋ ಒಂದೆರಡು ಹೋಟೆಲ್ನವರು ಹೀಗೆ ಗ್ರಾಹಕರಿಗೆ ಮೋಸ ಮಾಡಿದ್ದರಿಂದ ಇದೀಗ ಎಲ್ಲಾ ಹೋಟೆಲ್ನವರನ್ನೂ ಪ್ರವಾಸಿಗರು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರ ನಗರದ ಎವರೆಸ್ಟ್ ಹೋಟೆಲ್, ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾಂಸದ ಮಿಕ್ಸಿಂಗ್ ದಂಧೆಯಲ್ಲಿ ತೊಡಗಿದ್ದ ಎರಡು ಹೋಟೆಲ್ಗಳನ್ನು ಮುಚ್ಚಿಸಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಲತೀಫ್, ಶಿವರಾಜ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.