ನ್ಯೂಸ್ ನಾಟೌಟ್ : ರಕ್ಷಾ ಬಂಧನ ದಿನ ಅಂದ್ರೆ ಸಹೋದರ -ಸಹೋದರಿಯರು ಆಚರಿಸುವ ಹಬ್ಬ. ಒಂದೇ ತಾಯಿಯ ಗರ್ಭದಿಂದ ಜನಿಸಿ ಬಂದ ಅಣ್ಣ-ತಂಗಿಯರ ಪವಿತ್ರವಾದ ಬಾಂಧವ್ಯಕ್ಕೆ ಬೆಲೆ ಕಟ್ಟಲಸಾಧ್ಯ.ಹೀಗಾಗಿ ಆ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತೆ.
ಆದರೆ ಇಲ್ಲೊಂದು ಘಟನೆ ನಿಜಕ್ಕೂ ಬೆಚ್ಚಿ ಬೀಳಿಸೋ ಹಾಗಿದೆ.ಸ ಹೋದರಿಗೆ ರಕ್ಷಣೆ ನೀಡಬೇಕಾದ ಅಣ್ಣನೇ ಕಾಮುಕ ವೇಷ ತೊಟ್ಟು ಸಹೋದರಿ ಮೇಲೆರಗಿದ್ದಾನೆ. ಈ ಕೃತ್ಯವನ್ನು ನಿರಂತರವಾಗಿ ನಡೆಸುತ್ತಿದ್ದು, ಕಡೆಗೂ ಈತನಿಗೆ
ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018 ರಲ್ಲಿ ಆರೋಪಿ ಸಹೋದರ ತನ್ನ ಸಹೋದರಿಯ ಮೇಲೆ ನಿರಂತರ ಈ ಕೃತ್ಯ ಎಸಗುತಿದ್ದ ಎನ್ನಲಾಗಿದೆ.ಇದರಿಂದ ಸಹೋದರಿ ತನ್ನ ಹದಿನಾಲ್ಕನೇ ವರ್ಷಕ್ಕೆ ಗರ್ಭ ಧರಿಸಿದ್ದಳು ಎಂದು ಹೇಳಲಾಗಿದೆ.ಮಾತ್ರವಲ್ಲ,ಇಷ್ಟಾಗಿಯೂ ನೀನೆಲ್ಲೂ ಇದನ್ನ ಬಾಯಿ ಬಿಡಬಾರದು ಎಂಬುದಾಗಿ ಸ್ವತಃ ಸಹೋದರನೇ ಸಹೋದರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದೀಗ ಪ್ರಕರಣ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಒಡಿಶಾ ಹೈ ಕೋರ್ಟ್ ಆರೋಪಿ ಸಹೋದರನಿಗೆ ಶಿಕ್ಷೆಗೊಳಪಡಿಸಿದೆ.ಜತೆಗೆ 40,000 ದಂಡದ ಶಿಕ್ಷೆಯನ್ನು ವಿಧಿಸಿದೆ.ಒಂದು ವೇಳೆ ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆರಡು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ಆತನಿಗೆ ವಿಧಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿ ಎಸ್ ಕೆ ಸಾಹೂ ಮಾತನಾಡಿ ” ರಕ್ಷಾ ಬಂಧನದ ದಿನದಂದು ಈ ಪ್ರಕರಣದ ತೀರ್ಪು ನೀಡಬೇಕಾಗಿ ಬಂತು ಎಂದು
ಬೇಸರ ವ್ಯಕ್ತಪಡಿಸಿದರು.
“ಒಬ್ಬ ಸಹೋದರನು ತನ್ನ ಸಹೋದರಿಯನ್ನು ರಕ್ಷಿಸಲು ಮಾತ್ರವಲ್ಲದೆ ತನ್ನ ಕೊನೆಯ ಉಸಿರಿನವರೆಗೂ ಅವಳನ್ನು ಪೋಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕಾದ ಮಂಗಳಕರ ದಿನದಂದು ಸಹೋದರನಿಗೆ ಜೈಲು ಶಿಕ್ಷೆಯ ತೀರ್ಪು ನೀಡಬೇಕಾದ ಸಂದರ್ಭ ಬಂದೊದಗಿದೆ ಎಂಥ ವಿಪರ್ಯಾಸ “ಎಂದು ನ್ಯಾಯಮೂರ್ತಿ ಸಾಹೂ ಹೇಳಿದರು.