ನ್ಯೂಸ್ ನಾಟೌಟ್ : ಅಡುಗೆ ಅಂದ್ರೆ ಸಾಕು ಕೆಲ ಮಹಿಳೆಯರಿಗೆ ಬಾರಿ ಇಷ್ಟ.ರುಚಿ ರುಚಿಯಾದ ಅಡುಗೆ ಮಾಡಿ ಬಡಿಸಿ ಚೆನ್ನಾಗಿದೆ ಅನ್ನೋ ಫೀಡ್ ಬ್ಯಾಕ್ ತಕೊಂಡಾಗಲೆ ಸಮಾಧಾನ.ಇನ್ನೂ ಕೆಲವರಿಗೆ ದಿನವಿಡೀ ಕೆಲಸ ಮಾಡಿ ಮನೆಗೆ ಬಂದು ಅಡುಗೆ ಮಾಡೋದರಲ್ಲಿ ಸಾಕು ಸಾಕಾಗಿ ಹೋಗುತ್ತೆ.ಇನ್ಮುಂದೆ ವೆಜ್, ನಾನ್ ವೆಜ್ ಅಡುಗೆ ಮಾಡೋದಿದ್ರೆ ಯಾವುದೇ ಚಿಂತೆಗೊಳಗಾಗುವ ಅಗತ್ಯವಿಲ್ಲ ಯಾಕೆ ಅಂತೀರಾ.. ಇಲ್ಲಿ ಓದಿ..
ನಾನ್ ವೆಜ್ ಪದಾರ್ಥವನ್ನು ಇಷ್ಟ ಪಡುವವರು ಅಧಿಕ ಮಂದಿ ಇದ್ದಾರೆ. ಆದರೆ ಅದನ್ನು ರೆಡಿ ಮಾಡೋದು ಹೇಗೆ ಅನ್ನೋ ಗೊಂದಲ ಬಹುತೇಕರನ್ನು ಕಾಡುತ್ತೆ.ಯಾಕೆಂದರೆ ಅದನ್ನು ರೆಡಿ ಮಾಡೋದು ಕೂಡ ಒಂದು ಕಲೆಯೇ.ಉಪ್ಪು ಹುಳಿ ಖಾರ ಜತೆಗೆ ಅದಕ್ಕೆ ಹಾಕುವ ಐಟಮ್ ಸರಿಯಾಗಿದ್ದರೆ ಎಲ್ಲವೂ ಸರಿಯಾದಂತೆ.ಇದೀಗ ನಾನ್ ವೆಜ್ನ್ನು ಕೂಡ ಈ ಮೆಷಿನ್ ರೆಡಿ ಮಾಲಿದ್ದು, ಮಾರ್ಕೆಟ್ ಗೆ ಬಂದಿದೆ.ಸದ್ಯ ಇದು ಬಾರಿ ಸುದ್ದಿಯಲ್ಲಿದೆ.
ಹೌದು,ಕೃತಕ ಬುದ್ಧಿಮತ್ತೆ ಅರ್ಥಾತ್ ಎಐ ಬಗ್ಗೆ ನೀವು ಕೇಳಿಯೇ ಇರ್ತೀರಿ. ಇದೀಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧರಿಸಿ ಅಡುಗೆ ಮಾಡೋ ಮಷಿನ್ ಬಂದಿದೆ.ಇದು ಒಂದಲ್ಲ, ಎರಡಲ್ಲ ಬರೋಬ್ಬರಿ 250ಕ್ಕೂ ಹೆಚ್ಚು ವಿಧದ ರುಚಿಯಾದ ಖಾದ್ಯಗಳನ್ನ ತಯಾರಿಸಿ ನಿಮ್ಮೆದುರು ಇಡುತ್ತೆ ಅಂದರೆ ನಿಮಗೆ ಆಶ್ಚರ್ಯವಾಗದಿರಲ್ಲ.
ಮಾಹೆಕ್ ಮತ್ತು ಮೋಜಿತ್ ಎಂಬ ಇಬ್ಬರು ಯುವಕರು ಈ ಸಾಧನೆ ಮಾಡಿದ್ದು, ಬೆಂಗಳೂರಲ್ಲೇ ಹುಟ್ಟುಹಾಕಿದ upliance.ai ಕಂಪನಿಯ ಒಂದೂವರೆ ವರ್ಷದ ಶ್ರಮದ ಫಲ ಇದಾಗಿದೆ. ಈ ಡೆಲಿಷ್ ಅಪ್ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ಈಗ ಎಲ್ಲರನ್ನು ಆಕರ್ಷಿಸುವಂತೆಯೂ ಮಾಡಲಾಗಿದೆ.
ಮಹಿಳೆಯರು ಹೇಗೋ ಭಾರಿ ಫಾಸ್ಟಾಗಿ ಅಡುಗೆ ಮುಗಿಸ್ತಾರೆ.ಇದರ ಪ್ರಯೋಜನವನ್ನು ಸದ್ಯ ಗಂಡಸರೇ ಹೆಚ್ಚಾಗಿ ಪಡೆಯುತ್ತಿದ್ದಾರಂತೆ. ಪ್ರತೀ ಶುಕ್ರವಾರ ಹೊಸ ರುಚಿಯೊಂದನ್ನು ಕಲಿಯುತ್ತೆ ಎಐ ಅಡುಗೆ ಮಷಿನ್..!
ವೆಜ್ ನಲ್ಲಿ ಸದ್ಯ ಅನ್ನ, ಸಾಂಬಾರ್, ರೊಟ್ಟಿ, ಪಿಸ್ತಾ, ಪಾಸ್ತಾ, ಬಿರಿಯಾನಿ, ನೂಡಲ್ಸ್ ಸೇರಿದಂತೆ 250ಕ್ಕೂ ಹೆಚ್ಚು ಅಡುಗೆ ಮಾಡಿಕೊಡುತ್ತೆ ಡೆಲಿಷ್ ಅಪ್ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್. ಚಿಲ್ಲಿ ಗಾರ್ಲಿಕ್ ನೂಡಲ್ಸ್ ಮಾಡಲು ಈ ಮಷಿನ್ಗೆ 20 ನಿಮಿಷ ಬೇಕಾದ್ರೆ, ಟೊಮೆಟೊ ಗ್ರೇವಿಯನ್ನಂತೂ 14 ನಿಮಿಷಕ್ಕೆ ರೆಡಿ ಮಾಡುತ್ತೆ. ಹೀಗೆ ಈ ಮೆಷಿನ್ ನೋಡಿ ಕೆಲವರಂತು ಮೂಕವಿಸ್ಮಿತರಾಗಿದ್ದಾರೆ.
ಒಂದೊಂದು ದಿನ ಆಫೀಸ್ ನಿಂದ ತಡವಾಗಿ ಬಂದವರಿಗೆ ,ಒಂಟಿಯಾಗಿರುವವರಿಗೆ,ಉದಾಸೀನ ಹಿಡಿದವರಿಗೆ , ಇಡೀ ದಿನ ಕೆಲಸ ಕೆಲಸ ಅಂತ ಕಳೆದೋಗುವವರಿಗಂತೂ ಈ ಮಷಿನ್ ತುಂಬಾ ಹೆಲ್ಪ್ ಆಗಲಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ಅದರ ಬೆಲೆ ಎಷ್ಟಿರಬಹುದು ಅಂತ ಯೋಚಿಸುತ್ತಿದ್ದೀರಾ? ಸದ್ಯ 21,999 ರೂಪಾಯಿ ಮಾತ್ರ. ಸಾಧ್ಯವಾದರೆ ನೀವು ಖರೀದಿಸಬಹುದು. ಮುಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿ ಈ ಮೆಷಿನ್ ಕಾಣ ಸಿಗೋದು ನಿಶ್ಚಿತ..!