ನ್ಯೂಸ್ ನಾಟೌಟ್ :ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು.ಸಾಧಿಸಬೇಕೆನ್ನುವ ಛಲ ಇರಬೇಕು ಅಷ್ಟೆ.ಇತ್ತೀಚನ ದಿನಗಳಲ್ಲಿ ಸಂಪಾದನೆ ಹೇಗೆ ಮಾಡೋದು? ಜಾಬ್ ಸಿಗ್ತಾ ಇಲ್ವಲ್ಲ ಎಂದು ಯೋಚನೆ ಮಾಡುತ್ತಾ ಕುಳಿತವರಿಗೆ ಈ ಒಂಭತ್ತನೇ ಕ್ಲಾಸಿನ ಹುಡುಗನೇ ಸ್ಪೂರ್ತಿ.ಯಾಕೆಂದರೆ ಈತ ತಿಂಗಳಿಗೆ ಬರೋಬ್ಬರಿ ೨ ಲಕ್ಷದಷ್ಟು ಸಂಪಾದನೆ ಮಾಡುತ್ತಿದ್ದಾನೆಂದರೆ ಎಲ್ಲರೂ ಅಚ್ಚರಿಪಡಬೇಕಾದ ವಿಚಾರ.
ಈತ ತಮಿಳುನಾಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿ. 9ನೇ ತರಗತಿಯಲ್ಲೇ ವಿಶ್ವದ ಅತಿದೊಡ್ಡ ಕಂಪನಿಯಾದ ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿದ್ದಾನೆ. ಈ ವಯಸ್ಸಿನಲ್ಲೇ ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದು, ಎಲ್ಲರನ್ನು ಅಚ್ಚರಿಗೊಳಗಾಗಿಸುವಂತೆ ಮಾಡಿದ್ದಾನೆ.ಈ ಪ್ರತಿಭಾವಂತ ಹುಡುಗನ ಹೆಸರು ಸೈಲೇಶ್. ಈತ ವಿರುದುನಗರ ಜಿಲ್ಲೆಯ ಇಳಂತಿಕುಲಂ ಏರಿಯಾದ ನಲ್ಲಪೆರುಮಾಳ್ ಮತ್ತು ಮುತುಲಕ್ಷ್ಮೀ ದಂಪತಿಯ ಪುತ್ರ. ಇವರ ಕುಟುಂಬ 8 ವರ್ಷಗಳ ಹಿಂದೆಯೇ ಚೆನ್ನೈಗೆ ವಲಸೆ ಬಂದು ನೆಲೆಸಿದೆ. ಸದ್ಯ ಚೆನ್ನೈನ ಮೀಂಜೋರ್ನಲ್ಲಿ ಕುಟುಂಬ ವಾಸವಿದೆ.
ಈ ಹುಡುಗನ ತಂದೆ ನಲ್ಲಪೆರುಮಾಳ್ ಅವರು ತಮ್ಮದೇಯಾದ ಐರನ್ ಬಿಸಿನೆಸ್ ಮಾಡುತ್ತಿದ್ದಾರೆ. ತಾಯಿ ಮುತ್ತುಲಕ್ಷ್ಮೀ ತಮ್ಮ ಪತಿಗೆ ನೆರವಾಗಿದ್ದಾರೆ.ಆದರೆ ತೀರಾ ಬಡಕುಟುಂಬ .ಚಿಕ್ಕಂದಿನಿಂದಲೇ ಬಡತನದ ಬೇಗೆಯನ್ನು ಅನುಭವಿಸಿದ ಹುಡುಗ ತಾನೇನಾದರೂ ಮಾಡಬೇಕು.ಮನೆಗೆ ಆಧಾರಸ್ತಂಭವಾಗಿ ನಿಲ್ಲಬೇಕು ಎನ್ನುವ ಉದ್ದೇಶದಿಂದ ಸದಾ ಕ್ರಿಯೇಟಿವ್ ಆಗಿ ಯೋಚಿಸುತ್ತಿದ್ದ.ಹೀಗಾಗಿ ದಂಪತಿಯ ಹಿರಿಯ ಪುತ್ರನಾಗಿರುವ ಸೈಲೇಶ್ಗೆ ಮೊಬೈಲ್ ಫೋನ್ಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿದ್ದ.ಮೋಬೈಲ್ ನಲ್ಲಿ ಮುಳಗಿದ್ದ ಆತ ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಕ್ಕೆ ಬಳಸದೇ ಕಲಿಕೆಯ ದೃಷ್ಟಿಯಲ್ಲಿ ಉಪಯೋಗಿಸಿದರ ಫಲ ಇಂದು ಆತನ ಕೈಹಿಡಿದಿದೆ.
ಹೀಗೆ ದಿನ ಕಳೆದಂತೆ ಮೊಬೈಲ್ನಲ್ಲೇ ಮುಳುಗಿದ್ದ ಈತ ಮೊಬೈಲ್ನಲ್ಲಿ ವ್ಯವಹಾರ ಮಾಡಲು ಶುರು ಮಾಡಿದ.ಇದೀಗ ಸೈಲೇಶ್ 3 ಆ್ಯಪ್ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಎರಡು ಕಂಪನಿ ಈಗಾಗಲೇ ಈತನ ಎರಡು ಗೇಮ್ ಸಂಬಂಧಿತ ಆ್ಯಪ್ಗಳಲ್ಲಿ ಹಣ ಪಾವತಿ ಮಾಡಿವೆ.ಈತನ ಈ ಸಾಧನೆಗೆ ಮತ್ತು ಒಂದು ಹೆಜ್ಜೆ ಎಂಬಂತೆ ಇದೀಗ ವಿಶ್ವದ ಅತಿದೊಡ್ಡ ಕಂಪನಿ ಅಮೇಜಾನ್ ಸೈಲೇಶ್ನನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೈಲೇಶ್ ಅಮೇಜಾನ್ ಕಂಪನಿಗಾಗಿ ಆ್ಯಪ್ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಬಿಜಿಯಾಗಿದ್ದಾನೆಂದು ತಿಳಿದುಬಂದಿದೆ.
ಸಾಮಾನ್ಯವಾಗಿ 9ನೇ ಕ್ಲಾಸಿನ ಹುಡುಗರು ಮೊಬೈಲ್ ಫೋನ್ ಬಳಕೆ ಮಾಡಿದಾಗಲೆಲ್ಲ ಇವರೇನು ಗೇಮ್ ಆಡುತ್ತಿರಬಹುದು.ಇಲ್ಲವೇ ಇನ್ನೇನಾದರೂ ವಿಡಿಯೋಗಳನ್ನು ನೋಡುತ್ತಿರಬಹುದು ಎಂದೇ ಹೆಚ್ಚಿನವರು ಯೋಚನೆ ಮಾಡುತ್ತಾರೆ.ಆದರೆ ಈ ಹುಡುಗ ಮಾತ್ರ ಅವೆಲ್ಲದಕ್ಕು ತದ್ವಿರುದ್ಧವಾಗಿ ನಿಲ್ಲುತ್ತಾನೆ.ಆರಂಭದಲ್ಲಿ ಮೊಬೈಲ್ ಫೋನ್ ಅನ್ನು ಗೇಮಿಂಗ್ಗಾಗಿ ಬಳಸುತ್ತಿದ್ದರೂ ನಂತರದಲ್ಲಿ ಟೆಕ್ನಾಲಜಿ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾನೆ.
ಅಂತು ಈ ಹುಡುಗನ ಸಾಧನೆ ಅಮೋಘವಾದುದು. ಅತಿ ಕಿರಿ ವಯಸ್ಸಲ್ಲೇ ತಂದೆ-ತಾಯಿ ಆಧಾರವಾಗಿ ನಿಂತ ಈ ಹುಡುಗ ಇನ್ನೂ ಸಾವಿರ ಕನಸುಗಳೊಂದಿಗೆ ಬೆಳೆಯುತ್ತಿದ್ದಾನೆ. ಕೇವಲ ಆ್ಯಪ್ ರಚಿಸುವ ಯೋಚನೆ ಇದ್ದರೆ ಆ್ಯಪ್ ತಯಾರಿಸುವುದಿಲ್ಲ, ಅದಕ್ಕೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎನ್ನುತ್ತಾರೆ ಸೈಲೇಶ್. ನನಗೆ ನನ್ನ ಕಂಪ್ಯೂಟರ್ ಶಿಕ್ಷಕರು ಮತ್ತು ಸ್ನೇಹಿತರು ಬೆಂಬಲ ನೀಡಿದರು ಎಂದು ಅವರು ಹೇಳುತ್ತಾನೆ.ಏನೇ ಆಗ್ಲಿ ಮೊಬೈಲ್ ಬಳಕೆ ಮಾಡುತ್ತಾ ಟೈಮ್ ವೇಸ್ಟ್ ಮಾಡುವ ಬದಲು ಬದುಕಿನ ದಾರಿ ಕಂಡು ಕೊಂಡರೆ ಅದಕ್ಕಿಂತ ಖುಷಿ ಇನ್ನೇನಿದೆ.ಇಷ್ಟು ಸಣ್ಣ ವಯಸ್ಸಲ್ಲೇ ಬದುಕಿನ ಗಂಭೀರತೆ ಅರ್ಥಮಾಡಿಕೊಂಡು ಮುನ್ನಡೆಯುತ್ತಿರುವ ಈ ಹುಡುಗ ನಿಜಕ್ಕೂ ಗ್ರೇಟ್…!