ನ್ಯೂಸ್ ನಾಟೌಟ್ : ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ನಿಮ್ಗೆ ಗೊತ್ತಿದೆ. ಆಕೆಯ ಲವ್ ಸ್ಟೋರಿ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ.ಇನ್ನೇನು ಆದಿಲ್ ನೊಂದಿಗೆ ಚೆನ್ನಾಗಿದ್ದಾರೆ ಅನ್ನುವಷ್ಟರಲ್ಲೇ ಮತ್ತೊಂದು ರಂಪಾಟವೇ ನಡೆದು ಹೋಯಿತು.
ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ಪೊಲೀಸ್ ದೂರು ಕೊಟ್ಟರು.
ಆದಿಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.ನ್ಯಾಯಾಂಗ ಬಂಧನದಲ್ಲಿದ್ದ ಆದಿಲ್ ಇದೀಗ ಬಿಡುಗಡೆಗೊಂಡಿದ್ದು ರಾಖಿ ಕುರಿತಂತೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಆದಿಲ್ ಖಾನ್ ನಿನ್ನೆಯಷ್ಟೆ ಪತ್ರರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದು, ರಾಖಿ ಸಾವಂತ್ ಕುರಿತು ಕೇಳಿದ ಪ್ರಶ್ನೆಗೆ ಅವರು ಸ್ಪೋಟಕ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.
ನನ್ನನ್ನು ರಾಖಿ ಮತ್ತು ಆಕೆಯ ಸ್ನೇಹಿತರು ಸೇರಿ ಟ್ರ್ಯಾಪ್ ಮಾಡಿದ್ದಾರೆ.ನನ್ನನ್ನು ಹೇಗೆ ಸಿಲುಕಿಸಿದ್ದಾರೆ ಎನ್ನುವುದನ್ನು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ವಿವರಿಸುತ್ತೇನೆ. ನಿಜವಾಗಿಯೂ ಏನು ನಡೆದಿತ್ತು ಎಂದು ಸವಿಸ್ತಾರವಾಗಿ ಹೇಳುತ್ತೇನೆ ಎಂದಿದ್ದರು. ಅದೇ ರೀತಿ ಇಂದೇ ಅವರು ಪತ್ರಿಕಾಗೋಷ್ಠಿ ಮಾಡಿದ್ದು, ರಾಖಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ರಾಖಿಗೆ ನನ್ನ ಪರಿಚಯ ಕಾಮನ್ ಫ್ರೆಂಡ್ ಮೂಲಕ ಆಗಿತ್ತು.ನನ್ನ ಊರು ಮೈಸೂರಿಗೆ ಆಕೆ ಪದೇ ಪದೇ ಬರುತ್ತಿದ್ದಳು. ಅದೊಂದು ದಿನ ಅವಳ ಮೊಬೈಲ್ಗೆ ಬಂದ ಮೆಸೇಜ್ ಅನ್ನು ನಾನು ಓದಿದೆ.ಅದನ್ನು ನೋಡಿ ನನಗೆ ಶಾಕ್ ಆಯಿತು. ನಾನು ಊಹಿಸಿರದ ಮೆಸೇಜ್ ಅದಾಗಿತ್ತು.
ಅದರಲ್ಲಿ ಲಂಡನ್ನಲ್ಲಿ ಕಳೆದ ದಿನಗಳು ತುಂಬಾ ರೊಮ್ಯಾಂಟಿಕ್ ಆಗಿದ್ದವು. ನಾನು ಅದನ್ನು ಎಂದೂ ಮರೆಯುವುದಿಲ್ಲ ಎಂಬೆಲ್ಲಾ ಮಾತುಗಳು ಇದ್ದವು. ಅಲ್ಲಿಗೆ ರಾಖಿ ಆತನ ಜೊತೆ ಸಂಬಂಧ ಹೊಂದಿರುವುದು ತಿಳಿಯಿತು. ಅದಾಗಲೇ ರಿತೇಶ್ ಜೊತೆ ಅವಳು ಮದುವೆಯೂ ಆಗಿದ್ದು ನನಗೆ ತಿಳಿಯಿತು. ಆದರೆ ನನ್ನಿಂದ ಈ ವಿಷಯ ಮುಚ್ಚಿಟ್ಟಿದ್ದಳು ರಾಖಿ. ರಿತೇಶ್ನನ್ನು ಮದುವೆಯಾಗಬೇಕಿತ್ತು, ಆದರೆ ಆತ ಮೋಸ ಮಾಡಿದ ಎನ್ನುತ್ತಿದ್ದಳೇ ವಿನಾ ಮದುವೆಯಾದ ವಿಷಯವನ್ನೇ ಹೇಳಿರಲಿಲ್ಲ ಎಂದು ಆದಿಲ್ ಹೇಳಿದ್ದಾರೆ.
ಇಷ್ಟೆಲ್ಲಾ ಆಗಿಯೂ ಆಕೆ ನನ್ನ ಮೇಲೆ ಆರೋಪ ಮಾಡಲು ಶುರು ಮಾಡಿದ್ದಳು. ಮಾಧ್ಯಮಗಳ ಮುಂದೆ ಬಂದು ನಾನೇ ಆಕೆಗೆ ತೊಂದರೆ ಕೊಡುತ್ತಿದ್ದೇನೆ ಎಂದು ಡ್ರಾಮಾ ಮಾಡಲು ಶುರು ಮಾಡಿದ್ದಳು ಎಂದು ಆದಿಲ್ ಖಾನ್ ಹೇಳಿದ್ದಾರೆ. ನನ್ನ ಜೀವನದ ಅತಿ ದೊಡ್ಡ ಮೂರ್ಖತನ ಎಂದರೆ ನಾನು ಆಕೆಯನ್ನು ನಂಬಿದ್ದು. ಆಕೆ ಗರ್ಭಕೋಶವನ್ನೂ ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ ಎಂದೂ ಗಂಭೀರವಾಗಿ ಆರೋಪಿಸಿದ್ದಾರೆ.