ನ್ಯೂಸ್ ನಾಟೌಟ್ : ಆಟವಾಡಲೆಂದು ಹೋದ ಬಾಲಕ ಗುಂಡಿಗೆ ಬಿದ್ದು ದುರಂತ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕಾಮಗಾರಿಗೆ ನೀರು ಶೇಖರಣೆಗೆಂದು ಮಾಡಿದ್ದ ಗುಂಡಿಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಗೋಣಿಬೀಡುವಿನಲ್ಲಿ ಈ ಘಟನೆ ನಡೆದಿದ್ದು,ಅಶರ್ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ. ಮೂವರು ಬಾಲಕರು ಆಟವಾಡಲು ತೆರಳಿದ್ದ ವೇಳೆ ಓರ್ವ ಆಟವಾಡುತ್ತಾ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿ ಇದಾಗಿದ್ದು,ಮಕ್ಕಳು ತಿಳಿಯದೇ ಆ ಸ್ಥಳಕ್ಕೆ ಹೋಗಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದೀಗ ಬಾಲಕನ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ವರದಿಯಾಗಿದೆ.