ನ್ಯೂಸ್ ನಾಟೌಟ್ : ಬರ್ಗರ್ ಕಿಂಗ್ ಕಂಪನಿ ಉದ್ಯೋಗಿ ಕೆವಿನ್ ಫೋರ್ಡ್ 27 ವರ್ಷ ರಜೆ ಇಲ್ಲದೇ ಅಮೆರಿಕದ (America)ದಲ್ಲಿ ಕೆಲಸ ಮಾಡಿದ್ದರು. ಬರೋಬ್ಬರಿ 27 ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದ ವ್ಯಕ್ತಿಗೆ 3.5 ಕೋಟಿ ರೂ. ಬಹುಮಾನವಾಗಿ ಸಿಕ್ಕಿದೆ.
ಆದರೆ ನಿವೃತ್ತಿ ಸಂದರ್ಭದಲ್ಲಿ ಕಂಪನಿ ಇವರಿಗೆ ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ ಕೈ ತೊಳೆದುಕೊಂಡಿತ್ತು. ತನ್ನ ಅತ್ಯಮೂಲ್ಯ ಸೇವೆಗಾಗಿ ಕಂಪನಿಯಿಂದ ಏನಾದರು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಫೋರ್ಡ್ಗೆ ಸಹಜವಾಗಿಯೇ ನಿರಾಸೆಯಾಗಿತ್ತು.
ಇದರಿಂದ ಬೇಸರಗೊಂಡ ಫೋರ್ಡ್ನ ಮಗಳು ಸೆರಿನಾ ಸಾಮಾಜಿಕ ಜಾಲತಾಣದಲ್ಲಿ ತನ್ನ ತಂದೆಯ ಕರ್ತವ್ಯ ನಿಷ್ಠೆ ಬಗ್ಗೆ ವೀಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ತನ್ನ ತಂದೆ ಸೇವೆಗೆ ಅರ್ಹವಾದ ಮನ್ನಣೆ ಸಿಗಬೇಕು ಎಂದು GoFundMe ಅಭಿಯಾನವನ್ನು ಪ್ರಾರಂಭಿಸಿದರು ಎನ್ನಲಾಗಿದೆ.
ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದು, ಕೆವಿನ್ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವದಾದ್ಯಂತ ಜನರು ದೇಣಿಗೆ ನೀಡಿದ್ದರು. ಇದರ ಫಲವಾಗಿ 4,18,000 ಡಾಲರ್ ಅಂದರೆ 3.48 ಕೋಟಿಗೂ ಹೆಚ್ಚು ದೇಣಿಗೆ ಹರಿದು ಬಂದಿದೆ ಎನ್ನಲಾಗಿದೆ.