ನ್ಯೂಸ್ ನಾಟೌಟ್: ರಾಯಲ್ ಎನ್ಫೀಲ್ಡ್ ಬುಲೆಟ್ 350 ಯ ವಿನ್ಯಾಸವು ಕಾಲಾನಂತರದಲ್ಲಿ ಬದಲಾಗಿದ್ದರೂ, ಬೈಕಿನ ಒಟ್ಟಾರೆ ವಿನ್ಯಾಸವು ಇನ್ನೂ ಬಹುತೇಕ ಒಂದೇ ಆಗಿರುತ್ತದೆ. ಬಹುಶಃ ಅದಕ್ಕೇ ಇಂದಿಗೂ ಈ ಬೈಕ್ ಮೇಲಿನ ಜನರ ಪ್ರೀತಿ ಬದಲಾಗಿಲ್ಲ.
ರಾಯಲ್ ಎನ್ಫೀಲ್ಡ್ ತನ್ನ ಬೈಕ್ಗಳ ವೈಶಿಷ್ಟ್ಯಗಳನ್ನು ನಿರಂತರವಾಗಿ ನವೀಕರಿಸುತ್ತಿದೆ. ಆದ್ದರಿಂದ ಜನರಲ್ಲಿ ಅದರ ಜನಪ್ರಿಯತೆ ಮುಂದುವರಿಯುತ್ತದೆ. ನವೀಕರಿಸಿದ ವೈಶಿಷ್ಟ್ಯಗಳಿಂದಾಗಿ ಈ ಮೋಟಾರ್ಸೈಕಲ್ನ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. ರಾಯಲ್ ಎನ್ಫೀಲ್ಡ್ ಬುಲೆಟ್ 350 ಪ್ರಸ್ತುತ ರೂ. 1,50,795 ರಿಂದ ರೂ. 1,65,715 (ಎಕ್ಸ್ ಶೋ ರೂಂ) ಬೆಲೆ ರೂಪಾಯಿ ಇದೆ. ಇದರ ಆನ್ ರೋಡ್ ಬೆಲೆ ಸುಮಾರು ರೂ. 1.8 ಲಕ್ಷವಾಗಿದೆ.
ಆದರೆ 1986 ಬುಲೆಟ್ ಬೆಲೆ ರೂ 18,700 (ಆನ್ ರೋಡ್). ಇತ್ತೀಚೆಗೆ 1986 ರಲ್ಲಿ ಖರೀದಿಸಿದ ರಾಯಲ್ ಎನ್ಫೀಲ್ಡ್ ಬುಲೆಟ್ 350 ರ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರ ಮೇಲೆ ಬರೆದಿರುವ ಬೈಕ್ ಬೆಲೆ ನೋಡಿ ಎಲ್ಲರೂ ಆಶ್ಚರ್ಯ ಪಡುವಂತಾಗಿದೆ. ಬೈಕಿನ ಆನ್ ರೋಡ್ ಬೆಲೆ ಕೇವಲ ರೂ. 18,700 ಎಂದು ಬಿಲ್ ನಲ್ಲಿ ನಮೂದಿಸಲಾಗಿದೆ. ಈ ಬಿಲ್ 1986 ರಷ್ಟು ಹಿಂದಿನದ್ದು, ಇದು ಸುಮಾರು 37 ವರ್ಷಗಳಷ್ಟು ಹಳೆಯದು. ಇದು ಜಾರ್ಖಂಡ್ ರಾಜ್ಯದ ಸಂದೀಪ್ ಆಟೋದ ಬುಲೆಟ್ 350 ಮಾಡೆಲ್ ವೈರಲ್ ಬಿಲ್ ಆಗಿದೆ.
ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನು 1986 ರಲ್ಲಿ ಎನ್ಫೀಲ್ಡ್ ಬುಲೆಟ್ ಎಂದು ಪರಿಚಯಿಸಲಾಯಿತು. ಅಂದಿನಿಂದ ಇದನ್ನು ವಿಶ್ವಾಸಾರ್ಹ ಮೋಟಾರ್ಸೈಕಲ್ ಎಂದು ಪರಿಗಣಿಸಲಾಗಿದೆ. ಪ್ರಸ್ತುತ ಬುಲೆಟ್ 350 ರ ಕಾರ್ಬ್ ತೂಕ 191 ಕೆಜಿ ಇದೆ. ಇದು 6 ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಸುಮಾರು 37 kmpl ಮೈಲೇಜ್ ನೀಡುತ್ತದೆ.