ನ್ಯೂಸ್ ನಾಟೌಟ್ : ವ್ಯಕ್ತಿಗಳನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದರ ಬಗ್ಗೆ ವರದಿಗಳನ್ನು ಓದಿದ್ದೇವೆ.ಆದರೆ ಇಲ್ಲೊಬ್ಬಳು ಮಹಿಳೆ ಹಾವನ್ನೇ ಸುಪಾರಿ ಕೊಟ್ಟು ಉದ್ಯಮಿಯನ್ನು ಮುಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಉತ್ತರಾಖಂಡದ ಹಲ್ದ್ವಾನಿ ಎಂಬಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಉದ್ಯಮಿಯೊಬ್ಬರನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಈ ಹಿಂದೆ ಆ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು ಉದ್ಯಮಿಯನ್ನು ಮುಗಿಸಲು ಪ್ರಯತ್ನಿಸುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.ಜುಲೈ 15ರಂದು ಹಲ್ದ್ವಾನಿಯ ತೀನ್ ಪಾನಿ ಪ್ರದೇಶದ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬನ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು.ಈ ವೇಳೆ ಆ ವ್ಯಕ್ತಿಯ ಕಾಲಿನ ಮೇಲೆ ಹಾವು ಕಚ್ಚಿದ ಗುರುತು ಪತ್ತೆಯಾಗಿತ್ತು.
ಮೃತ ದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಮೃತ ವ್ಯಕ್ತಿ ಉದ್ಯಮಿಯೂ ಆಗಿರುವ ಅಂಕಿತ್ ಚೌಹಾಣ್ ಅವರ ಕುಟುಂಬವು ಪೊಲೀಸರಿಗೆ ದೂರು ನೀಡಿದ ನಂತರ ಅವರನ್ನು ಗುರುತಿಸಲಾಯಿತು ಎಂದು ತಿಳಿದು ಬಂದಿದೆ.ತನಿಖೆ ಸಮಯದಲ್ಲಿ, ಅಂಕಿತ್ ಚೌಹಾಣ್ ಅವರ ಕಾಲನ್ನು ಪರೀಕ್ಷಿಸಿದಾಗ ಹಾವು ಕಚ್ಚಿದ ಸ್ಥಿತಿಯಲ್ಲಿತ್ತು.ಇದರಿಂದ ಸಂಶಯಗೊಂಡ ಪೊಲೀಸರು ಕೊಲೆಯಲ್ಲಿ ಹಾವಾಡಿಗ ಭಾಗಿಯಾಗಿದ್ದಾನೆ ಎಂದು ಕಂಡುಕೊಂಡರು.
ಇದೀಗ ಹಾವಾಡಿಗನನ್ನು ಪೊಲೀಸರು ಬಂಧಿಸಿದ್ದಾರೆ. ನೈನಿತಾಲ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಭಟ್ ಅವರ ಪ್ರಕಾರ, ಈ ಕೊಲೆಯಲ್ಲಿ ಹಾವಾಡಿಗ ಸೇರಿದಂತೆ ಐದು ಜನರು ಭಾಗಿಯಾಗಿದ್ದಾರೆ. ಪ್ರಮುಖ ಆರೋಪಿ ಡಾಲಿ ಅಲಿಯಾಸ್ ಮಾಹಿ ಒಮ್ಮೆ ಅಂಕಿತ್ ಚೌಹಾಣ್ ಜತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಎಸ್ಎಸ್ಪಿ ಭಟ್ ಅವರ ಪ್ರಕಾರ ಮಾಹಿ ಎಂಬ ಯುವತಿ ಅಂಕಿತ್ರನ್ನು ವರ್ಷಗಳಿಂದ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು.ನಂತರ ಪ್ರಿಯಕರನನ್ನು ನಿರಾಕರಿಸಲು ಬಯಸಿದ್ದಳು.ಆದರೂ,ಉದ್ಯಮಿ ಅಂಕಿತ್ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದನು ಎನ್ನಲಾಗಿದೆ.ಹೀಗಾಗಿ ಆತನನ್ನು ಹೇಗಾದರೂ ಮುಗಿಸಬೇಕೆಂದು ಪ್ಲ್ಯಾನ್ ಮಾಡಿದ್ದು, ಹಾವು ಕಚ್ಚಿಸುವ ವ್ಯಕ್ತಿಯನ್ನು ನೇಮಿಸಿಕೊಳ್ಳುವ ಮೂಲಕ ಮಾಹಿ, ಅಂಕಿತ್ ಕೊಲೆಗೆ ಯೋಜಿಸಿದ್ದಳು ಎಂದು ಎಸ್ಎಸ್ಪಿ ತಿಳಿಸಿದ್ದಾರೆ.
ಮಾಹಿ ಮತ್ತು ಇತರ ಮೂವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಮೂಲಕ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.