ನ್ಯೂಸ್ ನಾಟೌಟ್ : ಮಕ್ಕಳು ಓದಿ ವಿದ್ಯಾವಂತರಾಗಿ ಒಳ್ಳೆ ಕೆಲಸ ಹಿಡಿಯಲಿ ಅನ್ನೋದೆ ಪೋಷಕರ ಕನಸು.ನಾವು ಪಟ್ಟ ಕಷ್ಟ,ನಿಂದನೆ,ಬಡತನ ತಮ್ಮ ಮಕ್ಕಳಿಗೆ ಆಗದಿರಲಿ ಅನ್ನುವ ಕೊರಗು ಅವರನ್ನು ಕಾಡುತ್ತಿರುತ್ತೆ.ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಮಗನನ್ನು ಚೆನ್ನಾಗಿ ಓದಿಸಬೇಕೆಂದು ಸ್ಕೂಲ್ ಫೀಸ್ ಗಾಗಿ ಹಣ ಹೊಂದಿಸುವ ಸಲುವಾಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾಳೆ..ಅಷ್ಟಕ್ಕೂ ಬಸ್ ಗೆ ಡಿಕ್ಕಿಯಾದ್ರೆ ಹಣ ಹೊಂದಿಸಕ್ಕಾಗುತ್ತಾ..?
ಹೌದು,ಯಾರೋ ಹೇಳಿದ ಮಾತನ್ನು ನಂಬಿ ಹಿಂದೆ ಮುಂದೆ ಯೋಚಿಸದೇ ತನ್ನ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಮಗ ಚೆನ್ನಾಗಿರಬೇಕು.ಆತ ಭವಿಷ್ಯದಲ್ಲಿ ಯಾವುದೇ ಕಷ್ಟಕ್ಕೆ ಒಳಗಾಗಬಾರದು ಎಂದು ಭವಿಷ್ಯ ಭದ್ರ ಮಾಡಲು ಹೋಗಿ ಅನ್ಯಾಯವಾಗಿ ಮಹಿಳೆ ಜೀವ ಕಳೆದುಕೊಂಡಿದ್ದಾಳೆ (Woman Died).
ಆ ಮಹಿಳೆಗೆ ಆ್ಯಕ್ಸಿಡೆಂಟ್ ಆದರೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣ ಬರುತ್ತೆ, ಅದರಲ್ಲಿ ಮಗನ ಶಾಲೆ ಫೀಸ್ ಕಟ್ಟಬಹುದು ಎಂದು ಯಾರೋ ಪುಕ್ಕಟೆ ಸಲಹೆ ಕೊಟ್ಟಿದ್ದು, ಇದರಿಂದ ಪ್ರೇರೆಪಣೆಗೊಂಡು ಆಕೆ ವೇಗವಾಗಿ ಬರುತ್ತಿದ್ದ ಬಸ್ಗೆ ತಾನೇ ಹೋಗಿ ಡಿಕ್ಕಿ ಹೊಡೆದು (Woman Hits To Bus) ಮೃತಪಟ್ಟಿದ್ದಾಳೆ.ತಮಿಳುನಾಡಿನ ಸೇಲಂನಲ್ಲಿ ನಡೆದ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ಸೇಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಪಾಪತಿ (45) ಹೀಗೊಂದು ತಪ್ಪು ನಿರ್ಧಾರ ಮಾಡಿದವರು.
ಕಳೆದ 15ವರ್ಷಗಳಿಂದಲೂ ಗಂಡನಿಂದ ದೂರವಿದ್ದ ಆಕೆ ಒಂಟಿಯಾಗಿ ಮಕ್ಕಳನ್ನು ನೋಡಿಕೊಂಡಿದ್ದಳು. ಮಗನ ಶಾಲೆಯ ಫೀಸ್ ಕಟ್ಟಬೇಕು,ಓದಿಸ ಬೇಕು,ಮನೆ ಖರ್ಚು ನೋಡಬೇಕು ಹೀಗಾಗಿ ಆಕೆ ಬಳಿ ಸಾಕಷ್ಟು ಹಣ ಇರಲಿಲ್ಲ. ಹೀಗಿದ್ದಾಗ ಆಕೆಗೆ ಯಾರೋ ನೀಡಿದ ಸಲಹೆಯಿಂದ ತನ್ನ ಮಗನಿಂದಲೇ ದೂರವಾಗುವ ಸನ್ನಿವೇಶ ಬಂದೊದಗಿದೆ. ಆ್ಯಕ್ಸಿಡೆಂಟ್ ಆಗಿ ಗಾಯಗೊಂಡರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದ ಯಾರದ್ದೋ ಮಾತಿಗೆ ಮರುಳಾಗಿ ಈ ನಿರ್ಧಾರ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ವಿಡಿಯೋ ದೃಶ್ಯದಲ್ಲಿ ನೀವು ಗಮನಿಸಿದ್ರೆ ಎಲ್ಲವೂ ತಿಳಿದು ಬರುತ್ತೆ.ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಕೆ ಏಕಾಏಕಿ ರಸ್ತೆ ಮಧ್ಯೆ ಬರುತ್ತಿದ್ದ ಬಸ್ ಎದುರು ಹೋಗಿದ್ದಾರೆ. ಬಸ್ ಡಿಕ್ಕಿಯಾದ ರಭಸಕ್ಕೆ ಕೆಳಗೆ ಬಿದ್ದವರು ಮತ್ತೆ ಎದ್ದೇಳಲೇ ಅನ್ನೋದು ವಿಪರ್ಯಾಸದ ಸಂಗತಿ.ಜೂನ್ 28ರಂದು ಪಾಪತಿ ಈ ಕೆಟ್ಟ ನಿರ್ಧಾರಕ್ಕೆ ಒಳಗಾಗಿದ್ದು, ಈ ಘಟನೆಗೆ ಜನ ಮರುಗಿದ್ದಾರೆ. ಪಾಪತಿ ಈ ಹಿಂದೆಯೇ ಬಡತನದಿಂದ ಬೇಸತ್ತಿದ್ದರು. ಖಿನ್ನತೆಗೂ ಜಾರಿದ್ದರು. ಮಗನ ಶಾಲೆ ಫೀಸ್ 45 ಸಾವಿರ ರೂ. ಕಟ್ಟುವ ಬಗ್ಗೆ ತೊಳಲಾಟಕ್ಕೆ ಒಳಗಾಗಿದ್ದರು. ಅಂತಿಮವಾಗಿ ಯಾರದ್ದೋ ಮಾತನ್ನು ಕೇಳಿ ಇಂತಹ ನಿರ್ಧಾರ ತೆಗೆದುಕೊಂಡಿದ್ದು ದುರಂತವೇ ಸರಿ.