ನ್ಯೂಸ್ ನಾಟೌಟ್ : ಗಂಡನ ಮೇಲೆ ಸೇಡು ಇಟ್ಟುಕೊಮಡಿದ್ದ ಹೆಂಡತಿ ಅದನ್ನು ಮುತ್ತು ಕೊಡುವ ವೇಳೆ ತೀರಿಸಿಕೊಂಡಿದ್ದಾಳೆ.ಗಂಡನ (Husband) ನಾಲಿಗೆಯನ್ನು ಪತ್ನಿ ಕಚ್ಚಿದ್ದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್ನಲ್ಲಿ (Kurnool) ನಡೆದಿದೆ.
ಇದೀಗ ಇಬ್ಬರ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು,ಆಂಧ್ರದ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ ದಂಪತಿ 2015ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು,ಯಲ್ಲಮ್ಮಗುಟ್ಟಾ ಥಂಡಾದಲ್ಲಿ ಇವರಿಬ್ಬರು ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಇಷ್ಟು ವರ್ಷ ಚೆನ್ನಾಗಿದ್ದ ಗಂಡ-ಹೆಂಡತಿ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಆಗಾಗ ಜಗಳಗಳು ನಡೆಯುತ್ತಿದ್ದು,ಇತ್ತೀಚೆಗೆ ದಂಪತಿ ನಡುವೆ ಜೋರು ಜಗಳ ನಡೆದಿದೆ. ಈ ವೇಳೆ ಇವರಿಬ್ಬರ ಕಿತ್ತಾಟ ಇಡೀ ಬೀದಿಯ ಜನರಿಗೆಲ್ಲಾ ಕೇಳಿಸಿದೆ.ಇದರಿಂದ ಬೇಸತ್ತಿದ್ದ ಹೆಂಡತಿ ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಆದರೆ ಇಬ್ಬರ ಕೋಪ ತಣ್ಣಗಾಗುತ್ತಿದ್ದಂತೆ ಗಂಡ ಪತ್ನಿ ಪುಷ್ಪಾವತಿಗೆ ಮುತ್ತು ಕೊಡಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಪುಷ್ಪಾವತಿ ಪತಿಯ ನಾಲಿಗೆಯನ್ನು ಹರಿತವಾದ ಹಲ್ಲಿನಿಂದ ರಕ್ತ ಬರುವ ಹಾಗೆ ಕಚ್ಚಿದ್ದಾಳೆ. ಇದರಿಂದ ಆತನ ನಾಲಿಗೆ ತೀವ್ರವಾಗಿ ಗಾಯಗೊಂಡಿದೆ.
ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇಷ್ಟೆಲ್ಲಾ ಆದ ಮೇಲೆ ಪುಷ್ಪಾವತಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ನನ್ನ ಗಂಡ ನನ್ನಿಂದ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ. ಹೀಗಾಗಿ ನಾಲಿಗೆ ಕಚ್ಚಿದ್ದೇನೆ ಎಂದಿದ್ದಾಳೆ.ಪತಿ ಕೂಡ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆಕೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.