ನ್ಯೂಸ್ ನಾಟೌಟ್ : ಖ್ಯಾತ ನಟ ಹಾಗೂ ಕಿರುತೆರೆಯ `ಬ್ರಹ್ಮಗಂಟು'(Bramhagantu Serial) ಸೀರಿಯಲ್ನಲ್ಲಿ ‘ಲಕ್ಕಿ'(Lucky) ಹೆಸರಿನ ಮೂಲಕ ಮನೆಮಾತಾದ ಭರತ್ ಬೋಪಣ್ಣ(Bharath Bopanna) ಬೆಳ್ಳಾರೆಯ ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಪಡೆದು ಬೆಂಗಳೂರಿಗೆ ಮರಳಿದ್ದಾರೆ.
ಕಳೆದ ಕೆಲ ಸಮಯಗಳಿಂದ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಭೋಪಣ್ಣ ಅವರು 15 ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬೆಂಗಳೂರಿಗೆ ವಾಪಾಸಾದರು ಎಂದು ತಿಳಿದು ಬಂದಿದೆ.ಈ ವೇಳೆ ಮಾತನಾಡಿದ ಅವರು “ಇಲ್ಲಿನ ಚಿಕಿತ್ಸೆ ತುಂಬಾ ಪ್ರಯೋಜನಕಾರಿಯಾಗಿದೆ.ಡಾ|ತಿರುಮಲೇಶ್ವರ ಭಟ್ ,ಡಾ|ಅವಿನಾಶ್,ಡಾ|ಜಯಶ್ರೀ,ಡಾ|ಅನಿತಾ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ
ಟಿವಿ ಲೋಕದಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಛಾಪೂ ಮೂಡಿಸಿದ್ದ ಭರತ್ ಬೋಪಣ್ಣ ಡೆಮೋ ಪೀಸ್(Demo Piece) ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು.ಇದೀಗ ಬಹುಭಾಷಾ ನಟರಾಗಿ ಗಿರಿಜಾ ಕಲ್ಯಾಣ, ರಾಧಾ ಕಲ್ಯಾಣ, ಮತ್ತು ಬ್ರಹ್ಮಗಂಟು ನಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದು, ಡೆಮೊ ಪೀಸ್ ಮೂಲಕ ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿದ್ದ ನಟ ಭರತ್ ಬೋಪಣ್ಣ ಅವರು ತಲೈವಿ ನಿರ್ದೇಶಕ ವಿಜಯ್ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ತಮಿಳು ಚಿತ್ರರಂಗಕ್ಕು ಪಾದಾರ್ಪಣೆ ಮಾಡಿದ್ದರು. ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ಸಿದ್ಧಗೊಂಡಿರುವ ಪ್ಯಾನ್ ಇಂಡಿಯಾ ‘ವಿಜಯಾನಂದ’ ಚಿತ್ರದಲ್ಲಿಯೂ ಭರತ್ ಬೋಪಣ್ಣ ಅವರು ನಟಿಸಿದ್ದರು.