ನ್ಯೂಸ್ ನಾಟೌಟ್: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ (Team India) ಮೊದಲ ಟೆಸ್ಟ್ಗೆ ಅಣಿಯಾಗುತ್ತಿದೆ. ಈಗಾಗಲೇ ವಿರಾಟ್ ಕೊಹ್ಲಿ ( Virat Kohli) ಪಡೆ Windsor Park ಕ್ರೀಡಾಂಗಣವನ್ನು ತಲುಪಿದ್ದು ವಿಂಡೀಸ್ ಗೆ ತವರಿನಲ್ಲೇ ಶಾಕ್ ನೀಡುವುದಕ್ಕೆ ತಯಾರಿ ನಡೆಸಿಕೊಂಡಿದೆ. ಈ ಟೆಸ್ಟ್ಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಟೀಂ ಇಂಡಿಯಾದ ಕಿಂಗ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಹಾಲಿ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಬಗ್ಗೆ ಭಾವನಾತ್ಮಕ ಪೋಸ್ಟ್ ವೊಂದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
12 ವರ್ಷಗಳ ಹಿಂದೆ ನಡೆದ ಇಲ್ಲಿನ ಟೆಸ್ಟ್ ಪಂದ್ಯದಲ್ಲಿ ಇಬ್ಬರು ತಂಡದಲ್ಲಿದ್ದೆವು. ಈಗಲೂ ಟೀಮ್ಮೇಟ್ಸ್ ಆಗಿದ್ದೇವೆ. 2011ರಲ್ಲಿ Dominicaದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಾವಿಬ್ಬರು ತಂಡದಲ್ಲಿದ್ದೇವು. ನಮ್ಮ ಪ್ರಯಾಣವು ಡಿಫ್ರೆಂಟ್ ಕೆಪಾಸಿಟಿಯೊಂದಿಗೆ ಇಲ್ಲಿಗೆ ಮತ್ತೆ ಹಿಂದಿರುಗಿಸುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ದ್ರಾವಿಡ್ ಜೊತೆಗಿನ ಕ್ಷಣಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ ಎಂದು ವಿರಾಟ್ ಬರೆದುಕೊಂಡಿದ್ದಾರೆ.
ಜುಲೈ 12 ರಿಂದ ಭಾರತ ತಂಡವು ವೆಸ್ಟ್ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ Dominicaಕಾದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 2011ರಲ್ಲಿ ಭಾರತ ವೆಸ್ಟ್ ವಿಂಡೀಸ್ ಪ್ರವಾಸ ಬೆಳೆಸಿತ್ತು. ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತ ತಂಡವು 1-0 ಅಂತರದಿಂದ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಮುರುಳಿ ವಿಜಯ್, ಹರ್ಭಜನ್ ಸಿಂಗ್, ದ್ರಾವಿಡ್ ಭಾರತ ತಂಡ ಗೆಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಮಾತ್ರವಲ್ಲ, ಯುವ ಆಟಗಾರ ವಿರಾಟ್ ಕೊಹ್ಲಿ ಕೂಡ 30 ರನ್ಗಳ ಕಾಣಿಕೆ ನೀಡಿ, ಗೆಲುವಿನ ರೂವಾರಿ ಆಗಿದ್ದರು.
ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್) ಆರ್.ಅಶ್ವಿನ್, ಆರ್.ಜಡೇಜಾ, ಶಾರ್ದುಲ್ ಠಾಕೂರ್, ಅಕ್ಸರ್ ಪಟೇಲ್, ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಅನಾದ್ಕಟ್, ನವದೀಪ್ ಸೈನಿ.