ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಭಾರೀ ಮಳೆಯಿಂದ ಭಾರೀ ಹಾನಿಗಳಾಗಿದ್ದು ವಿಶ್ವ ಹಿಂದೂ ಪರಿಷತ್ & ಭಜರಂಗದಳ ಕಾರ್ಯಕರ್ತರಿಂದ ಜುಲೈ ೨೫ ರಂದು ಕರಿಕೆ ವ್ಯಾಪ್ತಿಯಲ್ಲಿ ಶ್ರಮದಾನ ಕಾರ್ಯ ನಡೆಯಿತು.
ಭಾರೀ ಮಳೆಯಿಂದ ಭಾಗಮಂಡಲ ಕರಿಕೆ ವ್ಯಾಪ್ತಿಯಲ್ಲಿ ಕರಿಕೆ ಕುಂಡತ್ತಾಕಾನದ ವಿದ್ಯಾಶ್ರೀ ಎಂಬವರ ಮನೆಯ ಹಿಂಭಾಗದಲ್ಲಿ ಬರೆ ಕುಸಿತ ಉಂಟಾಗಿದ್ದು ಮಣ್ಣು ತೆರವು ಮಾಡಿದ್ದು, ಬಳಿಕ ಪಾಣತ್ತೂರು ಕರಿಕೆ ಭಾಗಮಂಡಲ ಹೆದ್ದಾರಿಯ ಬದಿಯ ಮೋರಿಯಲ್ಲಿ ಅಡ್ಡಲಾಗಿ ನಿಂತಿದ್ದ ಕಲ್ಲು- ಮರದ ದಿಮ್ಮಿಗಳನ್ನು ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ , ಸದಸ್ಯರಾದ ರಾಜೇಶ್ ಕೆ.ಕೆ , ಚೇತನ್ , ಚಂದ್ರಶೇಖರ್ , ಸತೀಶ್ , ಜಯಪ್ರಕಾಶ್ , ವಿನೋದ್ , ಸುರೇಶ್ ಕೆ.ಸಿ , ಇತರ ಸಂಘಟನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.