ನ್ಯೂಸ್ ನಾಟೌಟ್ : ಅದೃಷ್ಟ ಚೆನ್ನಾಗಿದ್ದಾರೆ ಯಾವ ಸಮಯದಲ್ಲಾದರೂ ಪಾರಾಗುತ್ತೇವೆ.ಅದೃಷ್ಟ ಕೈ ಕೊಟ್ಟಿತ್ತು ಎಂದರೆ ಎಷ್ಟೇ ಪ್ರಯತ್ನ ಪಟ್ಟರೂ ಅದರಿಂದ ಹೊರಬರೋದೇ ಕಷ್ಟ.ಇಲ್ಲೊಂದು ಕಡೆ ಇಂತಹುದ್ದೇ ಒಂದು ಘಟನೆ ನಡೆದಿದೆ.ಚಲಿಸುತ್ತಿದ್ದ ಕಾರುಗಳೆರಡರ ಮೇಲೆ ಏಕಾಏಕಿ ಬೃಹದಾಕಾರದ ಬಂಡೆ ಉರುಳಿ ಬಿದ್ದಿದೆ.ಪರಿಣಾಮ ಕಾರುಗಳು ಪುಡಿ ಪುಡಿಯಾಗಿರುವ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ಭಾರಿ ವೈರಲ್ ಆಗಿದೆ.
ಕಾರುಗಳಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಮುಂಜಾನೆ ಸಂಭವಿಸಿದ ಘಟನೆ ಇದಾಗಿದ್ದು, ನಾಗಾಲ್ಯಾಂಡ್ನ ಚುಮುಕೆಡಿಮಾ ಚೆಕ್ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 29ರಲ್ಲಿ ನಡೆದಿದೆ.ಈ ದೃಶ್ಯ ಹಿಂದಿದ್ದ ಕಾರುಗಳ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿದೆ.
ರಸ್ತೆ ಪಕ್ಕದ ಗುಡ್ಡದ ಮೇಲಿನಿಂದ ಮೂರು ನಾಲ್ಕು ಬಂಡೆಗಳು ಉರುಳಿಬಂದಿವೆ ಎನ್ನಲಾಗಿದೆ.ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ನಿಂದಾಗಿ ನಿಂತಿದ್ದ ಮೂರು- ನಾಲ್ಕು ಕಾರುಗಳು ಕ್ಷಣಾರ್ಧದಲ್ಲಿ ಪುಡಿಪುಡಿಯಾಗಿದ್ದಾವೆ.ಈ ಪ್ರಾಂತ್ಯದಲ್ಲಿ ಜೋರಾಗಿ ಮಳೆಯಾಗುತ್ತಿದ್ದು, ಕೆಲವೆಡೆ ಭೂಕುಸಿತ ಕೂಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಪೊಲೀಸರು ಗುಡ್ಡಗಾಡು ಪ್ರದೇಶಗಳಿಗೆ ತೆರಳುವವರಿಗೆ ಎಚ್ಚರಿಕೆಯ ಸೂಚನೆ ನೀಡುತ್ತಿದ್ದಾರೆ.ಕಳೆದ ಏಪ್ರಿಲ್ ತಿಂಗಳಲ್ಲಿ ಜಮ್ಮು- ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು.