ನ್ಯೂಸ್ ನಾಟೌಟ್ : ಹಲವು ಕಾರಣಗಳಿಂದಾಗಿ ಪಾಕಿಸ್ತಾನ (Pakistan) ಈಗ ಆರ್ಥಿಕವಾಗಿ ದಿವಾಳಿಯಾಗಿದೆ.ಪಾಕಿಸ್ತಾನ ದೇಶದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈಗ ಅನೇಕ ಜಾಗತಿಕ ಕಂಪನಿಗಳೂ ಅಲ್ಲಿಂದ ನುಣುಚಿಕೊಂಡಿವೆ.ಇದರ ಬೆನ್ನಲ್ಲೇ ಪಾಕ್ ವ್ಯಕ್ತಿಯೊಬ್ಬರು ವಿಮಾನದಲ್ಲಿಯೇ ಭಿಕ್ಷೆ ಬೇಡಿರುವ ವಿಡಿಯೋವೊಂದು ಭಾರಿ (Viral Video) ವೈರಲ್ ಆಗಿದೆ.
ವಿಮಾನಗಳಲ್ಲಿ ಪ್ರಯಾಣಿಸುವವರು ಉನ್ನತ ವರ್ಗದವರು ಎಂಬ ಭಾವನೆ ಇದೆ.ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಹಲವಾರು ನಿಯಮಗಳಿರುತ್ತವೆ.ಆದರೆ ಪಾಕಿಸ್ತಾನದ ನಾಗರಿಕನು ಅಲ್ಲಿಯೂ ಭಿಕ್ಷೆ ಬೇಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.ಹೌದು, ಕುರ್ತಾ, ಪೈಜಾಮ ಹಾಗೂ ನೀಲಿ ಜಾಕೆಟ್ ಧರಿಸಿರುವ ವ್ಯಕ್ತಿಯೊಬ್ಬ ವಿಮಾನದಲ್ಲಿಯೇ ಭಿಕ್ಷೆ ಬೇಡಿದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಆದರೆ ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಈತ ಯಾರು? ಎಂಬುದನ್ನು ಪತ್ತೆ ಹಚ್ಚಲು ಶುರು ಮಾಡಿದ್ದಾರೆ. ಪಾಕಿಸ್ತಾನದ ವೆಬ್ಸೈಟ್ ಸೇರಿ ಹಲವು ಮೂಲಗಳಿಂದ ಜನ ಈತ ಯಾರೆಂದು ಕೊನೆಗೂ ಪತ್ತೆಹಚ್ಚಿದ್ದಾರೆ. ಅಖ್ತರ್ ಲಾವಾ ಎಂಬ ಹೆಸರಿನ ವ್ಯಕ್ತಿಯೆಂದು ತಿಳಿದು ಬಂದಿದೆ.ಈ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಲಾಹೋರ್ನಲ್ಲಿ ಮದರಸಾವನ್ನು ಮುನ್ನಡೆಸಲು ಜನರ ಬಳಿ ಹಣ ಸಂಗ್ರಹಿಸಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.“ನಾವು ಮದರಸಾವೊಂದನ್ನು ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದೇವೆ. ಯಾರಿಗಾದರೂ ದಾನ ಮಾಡುವ ಮನಸ್ಸಿದ್ದರೆ ದಯಮಾಡಿ ದೇಣಿಗೆ ನೀಡಿ. ನೀವು ಎದ್ದು ಬಂದು ನನಗೆ ಹಣ ಕೊಡಬೇಕಿಲ್ಲ. ನಾನೇ ನಿಮ್ಮ ಬಳಿ ಬಂದು ಹಣ ಪಡೆಯುತ್ತೇನೆ” ಎಂದು ಅಖ್ತರ್ ಲಾವಾ ಹೇಳಿದ್ದಾನೆ.
ಈತ ಯಾರು ಎಂಬ ಕುತೂಹಲಕ್ಕೀಡಾಗಿ ಈತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅಖ್ತರ್ ಲಾವಾ ಲಾಹೋರ್ನ ಸ್ಥಳೀಯ ರಾಜಕಾರಣಿ ಎಂಬ ವಿಚಾರ ತಿಳಿದು ಬಂದಿದೆ. ಮೂಲಗಳ ಪ್ರಕಾರ, ಇವರು ಉದ್ಯಮಿಯೂ ಹೌದು ಎನ್ನುವ ಮಾಹಿತಿ ಹೊರಬಿದ್ದಿದೆ.