ನ್ಯೂಸ್ ನಾಟೌಟ್ : ಅದೊಂದು ಗ್ರಾಮದಲ್ಲಿ ಅದ್ದೂರಿ ವಿವಾಹ ಸಮಾರಂಭ ನಡಿತಿತ್ತು.ನೂರಾರು ಮಂದಿ ನೆಂಟರು, ಬಂದು ಬಳಗದವರು ವಧು -ವರರನ್ನು ಆಶೀರ್ವದಿಸಲು ಬಂದಿದ್ದರು.ಸಮಯ 12.30 ಆಗುತ್ತಿದ್ದಂತೆ ಇನ್ನೇನು ಮದುವೆ ಮುಗಿದು ಮದುವೆಗೆ ಆಗಮಿಸಿದವರಿಗೆ ಔತಣ ಕೂಟ ಏರ್ಪಡಿಸುವ ಖುಷಿಯಲ್ಲಿದ್ದರು.ಅಡುಗೆಯವರು ಅಡುಗೆ ತಯಾರಿ ಮಾಡಿ ಬಡಿಸುವ ಸಿದ್ಧತೆಯಲ್ಲಿದ್ದರು.ಅಡುಗೆ ಪರಿಮಳ ಊರಿಡೀ ಹಬ್ಬುವ ಹಾಗೆ ಭೂರಿ ಭೋಜನ ರೆಡಿ ಮಾಡಿದ್ದರು.ಅಷ್ಟೊತ್ತಿಗಾಗಲೇ ಅಡುಗೆ ರುಚಿಯನ್ನು ಸವಿಯಲು ಬಂದಿತ್ತು ನೂರಾರು ಆನೆಗಳ ಪುಂಡು…
ಈ ಘಟನೆ ನಡೆದಿದ್ದು ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಜಿಲ್ಲೆಯಲ್ಲಿ. ಕಳೆದ ವಾರ ಮದುವೆ ಸಮಾರಂಭ ನಡೆದಿದ್ದು ಮದುವೆಯಾದ ಬಳಿಕ ವರನ ಮನೆಯಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಮನೆಯವರೆಲ್ಲಾ ಔತಣ ಕೂಟದ ತಯಾರಿಯಲ್ಲಿದ್ದರು, ಬರುವ ನೆಂಟರಿಗೆ ಭರ್ಜರಿ ಊಟವನ್ನು ತಯಾರಿ ಮಾಡಲಾಗಿದ್ದು ಇದಕ್ಕಾಗಿ ಕೆಲವು ಮಂದಿ ಅಡುಗೆಯವರೂ ಬಂದಿದ್ದರು. ನೂರಾರು ಮಂದಿಗೆ ಬೇಕಾಗುವ ಅಡುಗೆಯನ್ನು ತಯಾರು ಮಾಡಿದ್ದು ಅದರ ಪರಿಮಳ ಊರಿಡಿ ಹಬ್ಬಿತ್ತು.ಇನ್ನೇನು ಮಧ್ಯಾಹ್ನದ ಹೊತ್ತು.ಹಸಿವಿನಲ್ಲಿದ್ದ ನೆಂಟರಿಷ್ಟರು ಊಟ ಮಾಡ ಮಾಡಬೇಕು ಅನ್ನುವಷ್ಟರಲ್ಲಿ ಅದೇ ಹೊತ್ತಿಗೆ ನೂರಾರು ಆನೆಗಳು ಬಂದು ಮದುವೆ ಮನೆಯ ಅಡುಗೆ ಕೋಣೆಗೆ ನುಗ್ಗಿ ಎಲ್ಲ ಅಡುಗೆಗಳನ್ನು ತಿಂದು ತೇಗಿದೆ.
ನೂರಾರು ಆನೆಗಳನ್ನು ನೋಡಿ ಭಯಭೀತರಾದ ಅಡುಗೆಯವರು ತಮ್ಮ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆಗೆ ಬಂದ ಕೆಲ ನೆಂಟರು ಸಿಕ್ಕ ಸಿಕ್ಕ ಕಡೆ ಓಡಲಾರಂಭಿಸಿದ್ದಾರೆ. ಅಷ್ಟೊತ್ತಿಗೆ ಮನೆಯ ಒಳಗಿದ್ದ ವಧು ಮತ್ತು ವರನಿಗೆ ವಿಚಾರ ತಿಳಿದು ಬಂತು.ಇನ್ನು ಈ ಆನೆಗಳು ನಮ್ಮನ್ನು ಬಿಡಲ್ಲ ಇಲ್ಲಿದ್ದರೆ ಅಪಾಯವೆಂದು ತಿಳಿದು ಇಬ್ಬರು ಬೈಕ್ ಏರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಪ್ರದೇಶದಲ್ಲಿ ಆಗಾಗ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು ಈ ಬಾಗದ ಜನರು ಬಾರಿ ತೊಂದರೆ ಅನುಭವಿಸುವಂತಾಗಿದೆ. ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಂಚರಿಸುತ್ತಿರುವುದು ಇಲ್ಲಿನ ನಿವಾಸಿಗಳ ನಿದ್ದೆಯನ್ನೇ ಕೆಡಿಸಿವೆ. ಅಲ್ಲದೆ ಜೊವಾಲ್ಬಂಗಾ, ಕಾಜ್ಲಾ, ಕುಸುಮ್ಗ್ರಾಮ್, ಝೋಬಾನಿ, ಆದಿಶೋಲ್ ಮತ್ತು ಕೊಲಬಾನಿ ಮುಂತಾದ ಪ್ರದೇಶಗಳಲ್ಲಿ ಆನೆಗಳ ಉಪಟಳ ಜೋರಾಗಿದ್ದು,ಸ್ಥಳೀಯರು ಕಂಗೆಟ್ಟಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಭಾಗದಲ್ಲಿ ಏನಾದರೂ ಘಂ ಎನಿಸುವ ಆಹಾರ ಖಾದ್ಯಗಳನ್ನು ತಯಾರಿಸಿದ್ರೆ ಸಾಕು ಆನೆಗಳ ಹಿಂಡು ರೆಡಿಯಾಗಿರುತಂತೆ.ಹೀಗಾಗಿ ಇಲ್ಲಿನ ನಿವಾಸಿಗಳು ಮನೆಯಲ್ಲಿ ಅಡುಗೆ ಮಾಡಲು ಕೂಡ ಹೆದರುತ್ತಿದ್ದಾರಂತೆ..
ಆನೆಗಳ ಉಪಟಳ ವಿಪರೀತವಾದ ಹಿನ್ನಲೆಯಲ್ಲಿ ಈ ಭಾಗದಲ್ಲಿ ಶುಭ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಜನ ಹೆದರುತ್ತಿದ್ದಾರೆ. ಇದೀಗ ಇಲ್ಲಿ ಮದುವೆಯನ್ನು ಮುಂದೂಡಿದ್ದಾರೆ.ಚುನಾವಣೆ ಸಂದರ್ಭದಲ್ಲಿಯೂ ಚುನಾವಣಾ ಪ್ರಚಾರ ಮಾಡೋದಕ್ಕೆ ಈ ಭಾಗಕ್ಕೆ ರಾಜಕೀಯ ನಾಯಕರು ಕೂಡ ಬರೋದಿಲ್ವಂತೆ ಕಾರಣ ಇದೇ ಆನೆಗಳ ಹಿಂಡು ..!