ನ್ಯೂಸ್ ನಾಟೌಟ್: ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿದ್ಯಾ ಹೇಳಿದ ಮಾತು ಕೇಳಿ ಆಕೆಯ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಾವು ಒಮ್ಮೆ ಮುಂಬೈನ ಪಂಚತಾರಾ ಹೋಟೆಲ್ನ ಹೊರಗೆ ಭಿಕ್ಷುಕಿಯಂತೆ ನಟಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಪ್ರಸ್ತುತ ‘ನೀಯತ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಇಂಡಿಯನ್ ಮ್ಯೂಸಿಕ್ ಗ್ರೂಪ್ನಲ್ಲಿ ನಾನು ಸ್ವಯಂ ಸೇವಕಿ ಆಗಿದ್ದೆ. ಅವರು ಪ್ರತಿ ವರ್ಷ ಶಾಸ್ತ್ರೀಯ ಸಂಗೀತ ಕಚೇರಿಗಳು, ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಆಯೋಜಿಸುತ್ತಾರೆ. ಮೂರು ದಿನಗಳ ಕಾಲ ಸಂಗೀತ ಉತ್ಸವ ಇರುತ್ತದೆ. ಇದು ರಾತ್ರಿಯಿಡೀ ಇರುತ್ತಿತ್ತು. ನಾವು ಎಲ್ಲವನ್ನೂ ಸಂಘಟಿಸಲು ಸಹಾಯ ಮಾಡುತ್ತಿದ್ದೆವು. ಕಾರ್ಯಕ್ರಮದ ನಂತರ ನಾವೆಲ್ಲರೂ ನಾರಿಮನ್ ಪಾಯಿಂಟ್ಗೆ ವಾಕ್ ಮಾಡಲು ಹೋಗುತ್ತಿದ್ದೆವು.
ಒಮ್ಮೆ ನನಗೆ ನನ್ನ ಗೆಳೆಯರು ಸವಾಲ್ ಹಾಕಿದ್ದರು. ನನಗೆ ಒಬೆರಾಯ್ನಲ್ಲಿರುವ ಕಾಫಿ ಶಾಪ್ಗೆ ಹೋಗಿ ಬಿಸ್ಕೆಟ್ ತಗೆದುಕೊಂಡು ಬರುವುದಾಗಿ ಹೇಳಿದ್ದರು. ಅದರಂತೆ ನಾನು ಹೋಟೇಲ್ ಹತ್ತಿರ ಹೋಗಿ, ದಯವಿಟ್ಟು ನನಗೆ ಹಸಿವಾಗಿದೆ, ನಾನು ನಿನ್ನೆಯಿಂದ ಏನನ್ನೂ ತಿಂದಿಲ್ಲ ಎಂದೆ ಇದರಿಂದ ನನ್ನ ಸ್ನೇಹಿತ ಮುಜುಗರಕ್ಕೊಳಗಾದರು ಆದ್ರೆ, ನಾನು ಪಂತವನ್ನು ಗೆದ್ದೆ ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.