ನ್ಯೂಸ್ ನಾಟೌಟ್: ಕೆಲಸ ಮಾಡಿದರೂ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಲಾರಿಯ ಚಾಲಕ ಮತ್ತು ಕ್ಲೀನರ್ ಸೇರಿ ಲಾರಿಯ ಡಿಸ್ಕ್ ಸಹಿತ ಲಾರಿಯ ಚಕ್ರಗಳನ್ನು ಕಳವು ಗೈದಿರುವ ಘಟನೆ ಮಂಗಳೂರಿನ ಪಣಂಬೂರು ಪೊಲೀಸ್ ಠಾಣೆ ಪ್ಯಾಪ್ತಿಯಲ್ಲಿ ನಡೆದಿದೆ.
ಲಾರಿ ಚಾಲಕ ಕೇರಳದ ಕೊಲ್ಲಂ ನಿವಾಸಿ ಸಮೀರ್ ಮತ್ತು ಕ್ಲೀನರ್ ಕನಕರಾಜು ಎಂಬವರು ಡಿಸ್ಕ್ ಸಹಿತ ಲಾರಿಯ ಚಕ್ರಗಳನ್ನು ಕಳವು ಮಾಡಿರುವ ಕುರಿತು ಈಗಲ್ ಲಾಜೆಸ್ಟಿಕ್ಸ್ ನ ಮ್ಯಾನೇಜರ್ ವೇಲುಮುರುಗನ್ ಟವರ್ಸ್ ನಾಮಕಲ್ಲು ಅವರು ದೂರು ನೀಡಿದ್ದಾರೆ. ಕಳವಾದ ಡಿಕ್ಸ್ ಸಹಿತ ಚಕ್ರಗಳ ಒಟ್ಟು ಮೌಲ್ಯ 2.06 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.