ನ್ಯೂಸ್ ನಾಟೌಟ್ : ರೀಲ್ಸ್ ಮಾಡಲೆಂದು ಹೋಗಿ ಯುವಕನೋರ್ವ ಕಾಲು ಜಾರಿ ಉಡುಪಿಯ(Udupi) ಅರಶಿನಗುಂಡಿ ಜಲಪಾತಕ್ಕೆ (Arsinagundi Falls) ಬಿದ್ದಿದ್ದ ಭದ್ರಾವತಿಯ ಯುವಕ ಶರತ್ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.ರೀಲ್ಸ್ ಗೀಳಿಗಾಗಿ ಜಲಪಾತದ ಬಂಡೆಕಲ್ಲುಗಳ ನಿಂತಿದ್ದ ಯುವಕ ಇದ್ದಕ್ಕಿದ್ದ ಹಾಗೆ ಕಾಲು ಜಾರಿ ನೀರು ಪಾಲಾಗಿದ್ದ. ಭದ್ರಾವತಿ ಮೂಲದ ಶರತ್ ಸ್ನೇಹಿತರ ಜತೆಗೂಡಿ ನಿನ್ನೆ(ಜುಲೈ 24) ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದ. ಈ ದೃಶ್ಯ ಆತನ ಗೆಳೆಯನ ಮೊಬೈಲ್ ನಲ್ಲಿ ಸೆರೆಯಾಗಿದ್ದು,ಈ ವಿಡಿಯೋ ಭಾರಿ ವೈರಲ್ ಕೂಡ ಆಗಿತ್ತು.
ಘಟನಾ ಸ್ಥಳಕ್ಕೆ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಯುವಕನ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದಾರೆ. ಆದ್ರೆ, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ. ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಳುಗು ತಜ್ಞರು, ಪೊಲೀಸರು ವಾಪಸ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬಸ್ಥರು ಮತ್ತು ಆತನ ಸ್ನೇಹಿತರು ” ನಿನ್ನೆಯಿಂದ ಸತತ ೮ ಗಂಟೆಗಳ ಕಾಲ ಕಾರ್ಯಾಚರಣೆ ಮಾಡಲಾಗಿದ್ದು,ಎಷ್ಟು ಹುಡುಕಾಡಿದರೂ ಶರತ್ ಪತ್ತೆಯಾಗಿಲ್ಲ.ಭಾರಿ ಮಳೆ ಹಿನ್ನಲೆಯಲ್ಲಿ ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಮೊದಲು ಸಿಗುವ ತೊರೆಯನ್ನು ದಾಟಲು ಸಾಧ್ಯವಾಗದಿದ್ದುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ವಾಪಸ್ಸು ಬಂದಿದ್ದೆವೆ ಎಂದಿದ್ದಾರೆ.
ಕೃಷಿ ಕೆಲಸ ಮಾಡಕೊಂಡಿದ್ದ ಶರತ್ ಇದೀಗ ಮಳೆಗಾಲ ಸಮಯವಾದ್ದರಿಂದ ಕೃಷಿ ಚಟುವಟಿಕೆಗಳು ಕಡಿಮೆ ಇರುತ್ತೆ. ಹೀಗಾಗಿ ಕೃಷಿಕರು ಮಳೆಗಾಲದ ಸಮಯದಲ್ಲಿ ಬಿಡುವು ಮಾಡಿಕೊಂಡು ದೂರದೂರುಗಳಿಗೆ ಪ್ರಯಾಣ ಬೆಳೆಸೋದು ಸಾಮಾನ್ಯ.ಹೀಗೆ ಈ ಯುವಕ ಕೂಡ ಕೊಲ್ಲೂರು ದೇವಾಲಯ ಮತ್ತು ಹೊಸಂಗಡಿಗೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿದ್ದು, ಜಲಪಾತಕ್ಕೆ ಹೋಗುವ ವಿಷಯವನ್ನು ಹೇಳಿರಲಿಲ್ಲ ಎಂದು ಮನೆಯವರು ಹೇಳಿದ್ದಾರೆ.
ಒಟ್ಟಿನಲ್ಲಿ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿದ್ದಶರತ್ ದೇವಾಲಯಕ್ಕೆಂದು ಬಂದವರು ಈ ಜಲಪಾತಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿ.ಮನೆ ಮಗನನ್ನು ಕಳೆದುಕೊಂಡು ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.