ನ್ಯೂಸ್ ನಾಟೌಟ್: ಉಡುಪಿ ಜಿಲ್ಲಾ ಕಾಂಗ್ರೆಸ್ ಹೆಸರಲ್ಲಿ ನಕಲಿ ಪೋಸ್ಟ್ ವೊಂದು ವೈರಲ್ ಆಗುತ್ತಿದೆ. ಪ್ರಿಯಾಂಕ ಖರ್ಗೆ ನಡೆಯಿಂದ ನಮಗೆ ಮುಜುಗರವಾಗುತ್ತಿದೆ ಅನ್ನೋ ನಕಲಿ ವೈರಲ್ ಪೋಸ್ಟ್ ಗೆ ಜಿಲ್ಲಾ ಕಾಂಗ್ರೆಸ್ ಕಿಡಿಕಾರಿದೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸೈಬರ್ ಕ್ರೈಂ ಮೂಲಕ ಸೂಕ್ತ ತನಿಖೆಗೆ ಆಗ್ರಹಿಸಿ ಮನವಿ ಮಾಡಲಾಗಿದೆ.
ಗೃಹ ಇಲಾಖೆಗೆ ಸಂಬಂಧಿಸಿದ ವಿಷಯಗಳಿಗೆ ನೀವು ಅನವಶ್ಯಕ ತಲೆ ಹಾಕುತ್ತೀರಿ, ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿ ಪಕ್ಷಕ್ಕೆ ಮುಜುಗರವಾಗುತ್ತಿದೆ.
ಕಾರ್ಯಕರ್ತರಾದ ನಮಗೆ ಕ್ಷೇತ್ರದಲ್ಲಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ನೀವು ಕಚೇರಿಯಲ್ಲಿ ಕುಳಿತು ಸುಖ ಸುಮ್ಮನೆ ಟ್ವೀಟ್ ಮಾಡುವುದರಿಂದ ಜನಸಾಮಾನ್ಯರಿಗೆ ಸಮಜಾಯಿಸಿ ನೀಡಲು ನಮಗೆ ಕಷ್ಟವಾಗುತ್ತಿದೆ. ಪಕ್ಷ ಸಂಘಟನೆಯ ಮೇಲೆ ನಿಮ್ಮಿಂದ ಕೆಟ್ಟ ಪರಿಣಾಮವಾಗಿದೆ. ಅನಗತ್ಯ ವಿಷಯಗಳಿಗೆ ಅಭಿಪ್ರಾಯ ಹೇಳುವುದು ಬಿಡಿ ಎಂಬ ಪೋಸ್ಟರ್ ವೈರಲ್ ಆಗುತ್ತಿದೆ.