ನ್ಯೂಸ್ ನಾಟೌಟ್ : ಸಣ್ಣ ಮಕ್ಕಳು ತಿಳಿಯದೇ ಬಾಯಿಗೆ ಹಾಕಿಕೊಂಡ ವಸ್ತುಗಳನ್ನು ನುಂಗುವುದಿದೆ.ಇದರಿಂದ ವಸ್ತುಗಳು ಗಂಟಲಲ್ಲಿ ಸಿಲುಕಿ ಕೆಲ ಮಕ್ಕಳು ಪ್ರಾಣವನ್ನೇ ಕಳೆದು ಕೊಂಡ ವರದಿಗಳನ್ನು ಓದಿದ್ದೇವೆ.ಆದರೆ ಇಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುತ್ತಾ ಟೂತ್ ಬ್ರಶ್ ನ್ನೇ ನುಂಗಿರುವ ಪ್ರಸಂಗ ನಡೆದಿದೆ.ನಂತರ ಗಂಟಲೊಳಗೆ ಸಿಲುಕಿದ್ದು ಸಂಕಷ್ಟದಲ್ಲಿ ಸಿಲುಕಿರುವ ಸಂಧಿಗ್ಧ ಪರಿಸ್ಥಿತಿ ನಿರ್ಮಾಣವಾಯಿತು.
ರಾಜಸ್ಥಾನದ ಉದಯಪುರದ ಚಿತ್ತೋರ್ನ ನಿವಾಸಿ ಗೋಪಾಲ್ ಸಿಂಗ್ ರಾವ್ (53) ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಗಂಟಲಿನೊಳಗೆ ಹೋಗಿದೆ. ತಕ್ಷಣ ಬಾಯಿಯೊಳಗೆ ಕೈ ಹಾಕಿ ಅದನ್ನು ಹೊರತೆಗೆಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಅಷ್ಟರಲ್ಲಾಗಲೇ ಬ್ರಶ್ ಹೊಟ್ಟೆಯೊಳಗೆ ಜಾರಿ ಹೋಗಿತ್ತು. ತಕ್ಷಣ ಗೋಪಾಲ್ ಸಿಂಗ್ಗೆ ಉಸಿರುಗಟ್ಟೋಕೆ ಆರಂಭವಾಯಿತು. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಅಲ್ಲಿನ ವೈದ್ಯರು ಟೂತ್ ಬ್ರಶ್ ತೆಗೆಯಲು ಸಾಧ್ಯವಾಗಲಿಲ್ಲ.ಹೀಗಾಗಿ ಗೋಪಾಲ್ ಸಿಂಗ್ನ್ನು ಅಮೆರಿಕನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ರಷ್ ಹೊಟ್ಟೆಯಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.ಕೂಡಲೇ ಇದಕ್ಕೆ ವ್ಯವಸ್ಥೆ ಮಾಡಿದ ವೈದ್ಯರು ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಜೆ.ತ್ರಿವೇದಿ ಅವರ ತಂಡವು ಎಂಡೋಸ್ಕೋಪಿಕ್ ವಿಧಾನದಿಂದ ಬ್ರಶ್ನ್ನು ತೆಗೆದುಹಾಕಲು ನಿರ್ಧರಿಸಿತು.ಇದು ಯಶಸ್ವಿಯೂ ಆಯಿತು.ಅಚ್ಚರಿಯ ವಿಚಾರವೆಂದರೆ ಶಸ್ತ್ರಚಿಕಿತ್ಸೆಯಿಲ್ಲದೆ ವೈದ್ಯರು ಹಲ್ಲುಜ್ಜುವ ಬ್ರಷ್ ಅನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.