ನ್ಯೂಸ್ ನಾಟೌಟ್ : ಮಕ್ಕಳು ಎಲ್ಲೆ ಹೋದರೂ ಅವರ ಮೇಲೆ ಒಂದು ಕಣ್ಣಿಟ್ಟಿರಬೇಕೆಂದು ಹಿರಿಯರು ಹೇಳೊದುಂಟು.ಇಲ್ಲೊಂದೆಡೆಡೆ ತಮ್ಮ ಪಾಲಕರೊಂದಿಗೆ ದನ ಮೇಯಿಸಲು ಹೋಗಿದ್ದಾಗ ಮಕ್ಕಳು ಮಹಾ ಎಡವಟ್ಟೊಂದನ್ನು ಮಾಡಿದ್ದಾರೆ. ಎರಡು ಮರಿಗಳು ಆಟವಾಡುತ್ತಿರುವುದನ್ನು ಗಮನಿಸಿದ ಮಕ್ಕಳು ಖುಷಿಯಿಂದ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬೆಕ್ಕಿನ ಮರಿ ಎಂದು ತಪ್ಪಾಗಿ ಭಾವಿಸಿದ್ದ ಮಕ್ಕಳು ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಗುರುಗ್ರಾಮದಿಂದ ಸುಮಾರು 56 ಕಿಲೋಮೀಟರ್ ದೂರದಲ್ಲಿರುವ ನುಹ್ಸ್ ಕೋಟ್ಲಾ ಗ್ರಾಮದಲ್ಲಿ ಗುರುವಾರ ರಾತ್ರಿ ಮಕ್ಕಳು ಆ ಮರಿಗಳು ಆಟವಾಡುತ್ತಿರುವುದು ಕಂಡುಬಂದಿದೆ.ಮನೆಗೆ ಬಂದು ನೋಡಿದಾಗ ಅವುಗಳು ಚಿರತೆ ಮರಿಗಳೆಂದು ಗೊತ್ತಾಯ್ತು. ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಶುಕ್ರವಾರ ಬೆಳಗ್ಗೆ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.
ವನ್ಯಜೀವಿ ನಿರೀಕ್ಷಕ ರಾಜೇಶ್ ಚಾಹಲ್ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮಾಹಿತಿ ಪಡೆದು, ಶುಕ್ರವಾರ ಬೆಳಗ್ಗೆ ಕೋಟ್ಲಾ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆಗ ಮರಿಗಳಿಗೆ ನಾಲ್ಕು ದಿನ ವಯಸ್ಸಾಗಿತ್ತು ಎಂದು ಚಹಾಲ್ ತಿಳಿಸಿದ್ದಾರೆ.
ಮರಿಗಳನ್ನು ಅವುಗಳ ತಾಯಿಯೊಂದಿಗೆ ಮತ್ತೆ ಸೇರಿಸಲು ಯೋಜಿಸುತ್ತಿದ್ದೇವೆ. ಆದಷ್ಟು ಬೇಗ ಮರಿಗಳನ್ನು ತಾಯಿಯೊಂದಿಗೆ ಮತ್ತೆ ಸೇರಿಸುತ್ತೇವೆ” ಎಂದು ಅರಣ್ಯ (ವನ್ಯಜೀವಿ) ಮುಖ್ಯ ಸಂರಕ್ಷಣಾಧಿಕಾರಿ ಎಂಎಸ್ ಮಲಿಕ್ ಹೇಳಿದ್ದಾರೆ.“ಎರಡೂ ಮರಿಗಳನ್ನು ನಿಗಾದಲ್ಲಿ ಇರಿಸಲಾಗಿದೆ ಎಂದಿದ್ದಾರೆ. ಈ ಪ್ರದೇಶದಲ್ಲಿ ಚಿರತೆಗಳ ಪಟ್ಟಿ ಹೆಚ್ಚುತ್ತಿರುವುದನ್ನೂ ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ನುಹ್ನ ಖೇರ್ಲಾ ಗ್ರಾಮದ ನಿವಾಸಿಗಳು ವಸತಿ ಪ್ರದೇಶದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಅರಾವಳಿಯಲ್ಲಿ ಜೋಡಿ ಚಿರತೆಗಳನ್ನು ಗುರುತಿಸಿದ್ದರು.