ನ್ಯೂಸ್ ನಾಟೌಟ್ : ದೇಶದಲ್ಲಿ ಟೊಮ್ಯಾಟೋ ಬೆಲೆ ಗಗಕ್ಕೇರಿದೆ.ಹೀಗಾಗಿ ಎಲ್ಲಿ ನೋಡಿದರಲ್ಲಿ ಟೊಮೆಟೊದ್ದೇ ಮಾತು ಕೇಳಿ ಬರುತ್ತಿದೆ. ಟೊಮೆಟೊ ಕಳ್ಳತನವಾಗಿದ್ದನ್ನು ಕೇಳಿದ್ದೇವೆ. ಟೊಮೆಟೊಗಾಗಿ ಜಗಳವಾಡಿದ್ದನ್ನು ಕೇಳಿದ್ದೇವೆ.ಆದರೆ ಇಲ್ಲೊರ್ವ ರೈತ ಟೋಮ್ಯಾಟೊಗಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ವರದಿಯಾಗಿದೆ.
ನರೇಮ್ ರಾಜಶೇಖರ್ ರೆಡ್ಡಿ (62) ಪ್ರಾಣ ಕಳೆದು ಕೊಂಡ ರೈತ. ಇಂತಹ ಕರುಣಾಜನಕ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ .ತಮ್ಮ ಜಮೀನಿನಲ್ಲಿ ಕಷ್ಟ ಪಟ್ಟು ಬೆಳೆದ ಟೊಮೆಟೊಗೆ ಏನೋ ದೇವರ ದಯೆಯಿಂದ ಒಳ್ಳೆಯ ದರ ಸಿಕ್ಕಿದೆ ಎಂದು ಸಂತಸದಿಂದಿದ್ದ ರೈತನ ಪ್ರಾಣವನ್ನು ದುಷ್ಕರ್ಮಿಗಳು ಕಸಿದಿದ್ದಾರೆ.ಟೊಮೆಟೊ ಬೆಳೆದು ತುಂಬಾ ಲಾಭ ಗಳಿಸಿದನ್ನು ನೋಡಿ, ಹಣ ಸುಲಿಗೆ ಮಾಡುವ ದುರುದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎನ್ನುವ ಅಂಶ ಬಯಲಾಗಿದೆ. ಅವರು ಇತ್ತೀಚೆಗೆ 70 ಕ್ರೇಟ್ಸ್ ಟೊಮ್ಯಾಟೋವನ್ನು ಮಾರುಕಟ್ಟೆಯಲ್ಲಿ ಮಾರಿದ್ದರು ಎಂದು ತಿಳಿದು ಬಂದಿದೆ.
ಮೃತ ರಾಜಶೇಖರ್ ಹಾಲು ಹಾಕಲೆಂದು ಮನೆಯಿಂದ ಹೋದವರು ಮರಳಿ ಬಾರದೇ ಇದ್ದಾಗ ಅನುಮಾನಗೊಂಡ ಪತ್ನಿ, ತನ್ನ ಮಗಳ ಬಳಿ ಹೇಳಿದ್ದಾರೆ. ಇಬ್ಬರು ಸೇರಿ ರಾಜಶೇಖರ್ಗೆ ಎಷ್ಟೇ ಫೋನ್ ಮಾಡಿದರೂ ಫೋನ್ ಮಾತ್ರ ಸ್ವಿಕರಿಸದಿದ್ದಾಗ ಅವರು ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲವು ಸಮಯಗಳ ನಂತರ ಮಾರ್ಗ ಬದಿಯಲ್ಲಿ ಫೋನ್ ಹಾಗೂ ಬೈಕ್ ಪತ್ತೆಯಾಗಿದ್ದು, ಇನ್ನೊಂದು ಬದಿಯಲ್ಲಿ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಹುಡುಕಾಟಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.ಹಣಕ್ಕಾಗಿಯೇ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಟೊಮ್ಯಾಟೋ ಮಾರಿ ಗಳಿಸಿದ್ದ ಹಣವನ್ನು ಸುಲಿಗೆ ಮಾಡಲು ದುಷ್ಕರ್ಮಿಗಳು ರಾಜಶೇಖರ್ರನ್ನು ಅಡ್ಡಗಟ್ಟಿದ್ದಾಗಿರಬಹುದು ಎಂದು ತಿಳಿದು ಬಂದಿದೆ. ರಾಜಶೇಖರ್ ಅವರು ಪತ್ನಿ ಜ್ಯೋತಿ, ಮಕ್ಕಳಾದ ಬಿಂದು ಮತ್ತು ಕೃತಿಯನ್ನು ರಾಜಶೇಖರ್ ಅಗಲಿದ್ದಾರೆ. ಮಕ್ಕಳಿಬ್ಬರು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.