ನ್ಯೂಸ್ ನಾಟೌಟ್ :ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘ ( ರಿ) ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರಳ್ಯ ಹಾಗೂ ನೆಹರೂ ಮೆಮೋರಿಯಲ್ ಕಾಲೇಜು ಉಪನ್ಯಾಸಕ ಪ್ರೊ . ಸಂಜೀವ ಕುದ್ಪಾಜೆ ಅವರಿಗೆ ಇಂದು (ಜುಲೈ ೧೯) ವರ್ತಕ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು .
ಈ ವೇಳೆ ಮಾತನಾಡಿದ ಶಾಸಕಿ ಭಾಗೀರಥಿ ಮುರಳ್ಯ “ಕ್ಷೇತ್ರದ ಅಭಿವೃದ್ಧಿ ಗಾಗಿ ನನ್ನನ್ನು ಗೆಲ್ಲಿಸಿದ ಸುಳ್ಯ ಕ್ಷೇತ್ರದ ಜನರಿಗೆ ನಾನು ಸದಾ ಋಣಿಯಾಗಿರುತ್ತೇನೆ.ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ.ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಈ ವೇಳೆ ವರ್ತಕ ಸಮುದಾಯ ಭವನದ ಆಡಳಿತ ಮಂಡಳಿಯಿಂದ ಅನುದಾನಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.ನಂತರ ಅಭಿನಂದನಾ ಭಾಷಣವನ್ನು ಮಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರಳ್ಯ ಅವರ ಬಗ್ಗೆ ಅಭಿಮಾನವಿದೆ. ಅವರ ಜೀವನ ,ನಡೆದು ಬಂದ ಹಾದಿ , ಪರಿಸ್ಥಿತಿ ಮತ್ತು ಇತರರಿಗೆ ಗೌರವ ಕೊಡುವ ನಡೆ ನಮಗೆಲ್ಲರಿಗೂ ಮಾದರಿಯೆಂಬಂತಿದೆ.ಅಲ್ಲದೇ ಸುಳ್ಯದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಕುರುಂಜಿ ವೆಂಕಟ್ರಮಣ ಗೌಡ ಅವರ ಸಾಧನೆಗಳ ಕುರಿತು ಮಾತನಾಡಿದರು.
ಇದೇ ವೇಳೆ ಪಿ.ಬಿ. ಹರೀಶ್ ರೈ ಹಾಗೂ ನೆಹರೂ ಮೆಮೋರಿಯಲ್ ಕಾಲೇಜು ಉಪನ್ಯಾಸಕ ಪ್ರೊ . ಸಂಜೀವ ಕುದ್ಪಾಜೆಯವರನ್ನು ಸನ್ಮಾನಿಸಲಾಯಿತು . ಈ ಸಂದರ್ಭ ಸುಳ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಪಿ.ಬಿ ಸುಧಾಕರ ರೈ , ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘದ ( ರಿ) ಕಾರ್ಯದರ್ಶಿ ಗಿರೀಶ್ , ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಿಪ್ಪೇಶ್ ಸ್ವಾಗತಿಸಿದರು.