ನ್ಯೂಸ್ ನಾಟೌಟ್ : ಈಗಂತೂ ಸೋಶಿಯಲ್ ಮೀಡಿಯಾ ಝಮಾನ. ಎಲ್ಲರೂ ಕೈನಲ್ಲಿ ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ತರಹೇವಾರಿ ವಿಡಿಯೋ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಕೆಲವರಂತು ವಿಡಿಯೋ, ಫೋಟೋಗಳ ಮೂಲಕವೇ ಸ್ಟಾರ್ ಗಳಾಗಿದ್ದಾರೆ. ಇತ್ತೀಚೆಗೆ ಚಿಕ್ಕಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.ಇದೀಗ ಸುಳ್ಯ ತಾಲೂಕಿನ ಸಂಪಾಜೆಯ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅವಕಾಶವೊಂದನ್ನು ಪಡೆದುಕೊಂಡಿದ್ದಾಳೆ.ಅಮೆಜಾನ್ ಆ್ಯಪ್ ನ ಮಕ್ಕಳ ವಿಭಾಗದ ಬಟ್ಟೆಗಳ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ..!
ಈಕೆ ಹೆಸರು ಸಮೃದ್ಧಿ ಎಸ್. ಸಂಪಾಜೆ. ಗೂನಡ್ಕ ಸದಾನಂದ ಎಂ. ಹಾಗೂ ಸುಳ್ಯ ನಗರ ಪಂಚಾಯತ್ ಉದ್ಯೋಗಿ ಆಶಾ ಬಿ.ಆರ್. ದಂಪತಿಯ ಪುತ್ರಿಯಾಗಿದ್ದು,ಸೋಶಿಯಲ್ ಮೀಡಿಯಾವನ್ನು ಸದ್ಬಳಕೆ ಮಾಡಿಕೊಂಡಿದ್ದಳು.ತನ್ನ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯ ಸಹಾಯದಿಂದ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಳು. ದಿನಕಳೆದಂತೆ ಈಕೆಯ ಫಾಲೋವರ್ಸ್, ವೀಕ್ಷಣೆ , ಲೈಕ್ಸ್ ಜಾಸ್ತಿಯಾಗತೊಡಗಿದೆ.ಇದು ಬಾಲಕಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಯಿತು.ಹೀಗೆ ಆಕೆಯ ಪ್ರತಿಭೆ ಅನಾವರಣಗೊಂಡಿತು. ಇದೀಗ ಆಕೆಯನ್ನು ಗುರುತಿಸಿ ಈ ಅವಕಾಶವನ್ನು ನೀಡಲಾಗಿದೆ.
RAS ಸಂಸ್ಥೆಯ ಆಡಿಷನ್ ಜಾಹೀರಾತು ನೋಡಿ ಅಪ್ಲೈ ಮಾಡಿದ ಪೋಷಕರು ಪ್ರೊಸೀಜರ್ ಮುಗಿದು ಸೆಲೆಕ್ಷನ್ ನಡೆಯಿತು. ಬೆಂಗಳೂರಿನಲ್ಲಿ RAS ಸಂಸ್ಥೆಯ ಮುಖಾಂತರ ಫೋಟೋಶೂಟ್ ಕೂಡ ನಡೆದಿದ್ದು, ಇದೀಗ ಅಮೆಜಾನ್ ಆ್ಯಪ್ ನ ಮಕ್ಕಳ ವಿಭಾಗದ ಉಡುಪುಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ..!ಇದೊಂದು ಆನ್ಲೈನ್ ಶಾಪಿಂಗ್ ಆ್ಯಪ್ ಆಗಿದ್ದು,ಇದರಲ್ಲಿ ಆಯ್ಕೆಯಾದ ಬಳಿಕ ಮಕ್ಕಳ ವಿಭಾಗದ ಡ್ರೆಸ್ ಗಳ ಫೋಟೋಶೂಟ್ ನಡೆಸಿ ಅಪ್ಲೋಡ್ ಮಾಡಲಾಗುತ್ತದೆ.
ಭವಿಷ್ಯದಲ್ಲಿಯೂ ಉತ್ತಮ ಅವಕಾಶಗಳು ಆಕೆಗೆ ಒಲಿದು ಬರಲಿದ್ದು,ಇಂತಹ ವೇದಿಕೆ ಸಿಕ್ಕಿರೋದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.ಸದ್ಯ ಈಕೆ ಗೂನಡ್ಕದ ಮಾರುತಿ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದು,ಶಾಲೆಯಲ್ಲಿಯೂ ಈಕೆಯ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಇದೀಗ ಅಮೆಜಾನ್ ನಲ್ಲಿ ಅವಕಾಶ ಪಡೆದಿದ್ದರೂ ಮುಂದಿನ ದಿನಗಳಲ್ಲಿ Myntra, hopscotch ಇನ್ನಿತರ ಆ್ಯಪ್ ಗಳ ಮೂಲಕವೂ ಬಟ್ಟೆ ಅಥವಾ ಇನ್ನಿತರ ವಸ್ತುಗಳ ಮಾಡೆಲ್ ಆಗಿಯೂ ಅವಕಾಶಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಡ್ಯಾನ್ಸ್ ಮೂಲಕ ಗಮನ ಸೆಳೆದ ಈ ಬಾಲಕಿ ಇದೀಗ ಇನ್ಸ್ಟಾಗ್ರಾಮ್ ನಲ್ಲಿಯೂ ರೀಲ್ಸ್ ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.