ನ್ಯೂಸ್ ನಾಟೌಟ್ : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಘಟಕದ ಯಂತ್ರ ಪದೇ ಪದೆ ಕೈಗೊಡುತ್ತಿದ್ದು, ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಟ ನಡೆಸುವಂತಾಗಿದೆ.
ಸುಳ್ಯದ ನಗರ ಪಂಚಾಯತ್ ಎದುರಿನಲ್ಲಿ ಅಳವಡಿಸುವ ಐದು ನಾಣ್ಯ ಹಾಕಿ ನೀರು ಪಡೆಯುವ ಈ ಯಂತ್ರವನ್ನೇ ಹೆಚ್ಚಿನ ಜನರು ತಮ್ಮ ದಿನನಿತ್ಯದ ಬಳಕೆಗೆ ಅವಲಂಬಿಸಿದ್ದಾರೆ. ಆದರೆ ಕೆಲವು ದಿನಗಳಿಂದ ಈ ಯಂತ್ರ ಪದೇ ಪದೆ ಕೆಟ್ಟು ಹೋಗಿದ್ದು , ಜನರು ನೀರಿಗಾಗಿ ಬಂದು ವಾಪಸ್ ಬಂದು ಹೋಗುವಂತಾಗಿದೆ.
ಈ ಬಗ್ಗೆ ನಗರ ಪಂಚಾಯತ್ನ್ನು ಸಂಪರ್ಕಿಸಿದಾಗ ಶುದ್ಧ ನೀರಿನ ಘಟಕದ ಯಂತ್ರದ ನಿರ್ವಹಣೆಯನ್ನು ಮೈಸೂರಿನಲ್ಲಿರುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆದ್ದರಿಂದ ಅಲ್ಲಿನ ಸಿಬ್ಬಂದಿ ಬಂದು ದುರಸ್ತಿ ಮಾಡಬೇಕಾಗಿದೆ. ಆದರೆ ಅಲ್ಲಿಯತನಕ ಸಾರ್ವಜನಿಕರು ಮಾತ್ರ ಖಾಸಗಿ ಸಂಸ್ಥೆಗೆ ಹೆಚ್ಚು ಹಣಕೊಟ್ಟು ನೀರು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಶುದ್ಧ ನೀರಿನ ಘಟಕದ ಯಂತ್ರವನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.