ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ , ರೈತರಿಗೆ ಎಲ್ಲಾ ವರ್ಗಗಳ ಜನರಿಗೆ ತಲುಪುವ ಬಜೆಟ್ ಮಂಡಿಸಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಪಿ.ಸಿ. ಜಯರಾಮ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 3 ಲಕ್ಷ ರೂ. ಕೃಷಿ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಿದ್ದಾರೆ. ಶೇ. 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 10 ಲಕ್ಷ ರೂ. ಕೃಷಿ ಅಭಿವೃದ್ಧಿ ಸಾಲದ ಮಿತಿಯನ್ನು 15 ಲಕ್ಷಕ್ಕೆ ಏರಿಸಿದ್ದಾರೆ. ಕೃಷಿಕರಿಗೆ ಕೃಷಿ ಉತ್ಪನ್ನ ಸಾಗಾಟಕ್ಕಾಗಿ ಪಿಕಪ್ ವಾಹನ ಖರೀದಿಸಲು ಶೇ. 4 ಬಡ್ಡಿದರದಲ್ಲಿ 7 ಲಕ್ಷ ರೂ. ಸಾಲ ಘೋಷಿಸಿದ್ದಾರೆ. ಕೃಷಿ ದಾಸ್ತಾನಿಗಾಗಿ ಗೋದಾಮು ನಿರ್ಮಿಸಲು ರೂ. 20 ಲಕ್ಷದ ವರೆಗೆ ಸಾಲ ನೀಡಿಕೆ ಮೊದಲಾದ ಕೊಡುಗೆಗಳನ್ನು ಕೃಷಿಕರಿಗೆ ನೀಡಿದ್ದು, 14ನೇ ಬಜೆಟ್ ಬಹಳ ಯಶಸ್ವಿಯಾಗಿ ಮಂಡಿಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿಗಳಾಗಿ ಪಿ.ಎಸ್. ಗಂಗಾಧರ, ಕೋಶಾಧಿಕಾರಿಯಾಗಿ ವಿಶ್ವನಾಥ ರೈ ಎನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಿ.ಸಿ. ಜಯರಾಮ್ ತಿಳಿಸಿದರು. ಉಪಾಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ, ಸದಾನಂದ ಮಾವಾಜಿ, ಎಸ್ ವೆಂಕಪ್ಪ, ದಿನೇಶ ಅಂಬೆಕಲ್ಲು, ರಾಜಾರಾಂ ಭಟ್, ತೀರ್ಥರಾಮ ಬಾಳಾಜೆ, ಧರ್ಮಪಾಲ ಕೊಯಿಂಗಾಜೆ, ಶ್ರೀಹರಿ ಕುಕ್ಕುಡೇಲು, ಹಸೈನಾರ್ ಹಾಜಿ ಗೋರಡ್ಕ, ಬೋಜಪ್ಪ ನಾಯ್ಕ, ಅಬ್ದುಲ್ ಗಫೂರ್, ಅನಿಲ್ ರೈ ಬೆಳ್ಳಾರೆ, ಬಿಟ್ಟಿ ಬಿ.ನೆಡುನೀಲಂ , ತೇಜಕುಮಾರ್ ಬಡ್ಡಡ್ಕ, ಮಹಮ್ಮದ್ ಕುಂಞ ಗೂನಡ್ಕ, ಪಿ.ಎ ಮಹಮ್ಮದ್, ಅಬ್ದುಲ್ ಮಜೀದ್ ನಡುವಡ್ಕ ಹಾಗೆಯೇ ಕಾರ್ಯದರ್ಶಿಗಳಾಗಿ ಸತ್ಯಕುಮಾರ್ ಅಡಿಂಜ, ಪ್ರಸಾದ್ ರೈ ಮೇನಾಲ, ಮೂಸೆಕುಂಞ ಪೈಂಬೆಚ್ಚಾಲು, ಚಂಚಲಾಕ್ಷಿ ಕತ್ತಡ್ಕ, ಲಕ್ಷ್ಮಣ ಬೊಳ್ಳಾಜೆ, ಮಹಮ್ಮದ್ ಫವಾಜ್, ಕರುಣಾಕರ ಆಳ್ವ, ದಿನೇಶ, ಸೋಮಶೇಖರ ನಾಯಕ್, ಅನುಸೂಯ, ಜಗದೀಶ ಹುದೇರಿ, ಸಿದ್ದಿಕ್ ಕೊಕ್ಕೋ, ಲತೀಫ್ ಅಡ್ಯಾರು, ಅಬೂಬಕ್ಕರ್ ಅಡ್ಯಾರು, ಅಬುಸಾಲಿ, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ಭಟ್, ಜಿನ್ನಪ್ಪ ಪೂಜಾರಿ, ಲೋಕೇಶ್ ಅಕ್ರಿಕಟ್ಟೆ, ಸನತ್ ಮುಳುಗಾಡು, ಶಕುಂತಲಾ ನಾಗರ ಧರ್ಮಣ್ಣ ನಾಯ್ಕ, ಜೂಲಿಯಾನ ಕ್ರಾಸ್ತಾ, ಸುಜಯ ಕೃಷ್ಣ, ಇಬ್ರಾಹಿಂ ಶಿಲ್ಪ , ಅನಿಲ್ ರೈ ಪುಡ್ಕಜೆ, ರಾಧಾಕೃಷ್ಣ ಪರಿವಾರಕಾನ, ಮಾಧ್ಯಮ ಸಂಯೋಜಕರಾಗಿ ಅಶೋಕ್ ಚೂಂತಾರು, ಸಹ ಸಂಯೋಜಕರಾಗಿ ನಂದರಾಜ್ ಸಂಕೇಶ ಅವರನ್ನು ಆಯ್ಕೆ ಮಾಡಲಾಗಿದೆ.
ಶೇಷಶಯನ ದೇರಾಜೆ, ಅಣ್ಣಾದೊರೈ, ತಿಮ್ಮಯ್ಯ ಗೌಡ, ಚರಣ್ ಕಾಯರ, ಮಾಧವ ಗೌಡ ದೊಡ್ಡಹಿತ್ತು, ಜಯರಾಮ ಮುಳ್ಯ, ಶುಭಕರ ಬೊಳಲ್ಲು, ಶೇಖರ, ವಿಜಯಕುಮಾರ ನರಿಯಾರು ಅಣ್ಣಾಜಿ ಗೌಡ ಪೈಲೂರು, ವೆಂಕಟ್ರಮಣ ಇಟ್ಟಿಗುಂಡಿ, ಸುರೇಶ್ ಕಾಮತ್, ಆದಮ್ ಸಾಹೇಬ್, ಕೆ ಪಿ ಶೇಖರ , ಹರೀಶಕುಮಾರ್ ಹುದೇರಿ, ದಿನೇಶ ಹಾಲೆಮಜಲು, ಮಿತ್ರದೇವ ಮಡಪ್ಪಾಡಿ, ಯಶೋಧರ ಬಾಕಿಲ, ಡಿ.ಎಸ್ . ಹರ್ಷಕುಮಾರ, ತಾರನಾಥ ಎ.ಎಸ್, ಜಯರಾಮ ಕಂಬಳ, ಲಿಜೋಜೋಸ್, ಧೀರಾಕ್ರಾಸ್ತಾ, ಶರೀಫ್ ಕಂಠಿ, ತಾಜುದ್ದೀನ್ ಅರಂತೋಡು, ಗಿರೀಶ್ ಪಡ್ಡಂಬೈಲು ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಅಂಬೆಕಲ್ಲು ಇವರಿಗೆ ಅಧಿಕೃತ ಪ್ರಮಾಣ ಪತ್ರದ ಮೂಲಕ ತಿಳಿಸಲಾಯಿತು ಎಂದು ಎಂದು ಪಿ.ಸಿ. ಜಯರಾಮ್ ತಿಳಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಎಂ.ಎಚ್, ಕಾರ್ಮಿಕ ನಾಯಕ ಚಂದ್ರಲಿಂಗಂ, ಪಕ್ಷದ ವಕ್ತಾರ ನಂದರಾಜ ಸಂಕೇಶ, ಅಸಂಘಟಿತ ಕಾರ್ಮಿಕ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ನೆಲ್ಲಿಕುಮೇರಿ ಸುದ್ದಿಗೋಷ್ಠಿಯಲ್ಲಿದ್ದರು.