ನ್ಯೂಸ್ ನಾಟೌಟ್: ಕಡಿಮೆ ಆದಾಯವುಳ್ಳ 45 ರಿಂದ 60 ವರ್ಷದೊಳಗಿನ ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆ ನೀಡುವುದಾಗಿ ಹರಿಯಾಣ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಅವಿವಾಹಿತರ ಜೊತೆಗೆ ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಹರ್ಯಾಣ ಸರ್ಕಾರ ಪ್ರಕಟಿಸಿದೆ ಎಂದು ವರದಿ ತಿಳಿಸಿದೆ.
ಪೊಲೀಸ್ ಸಿಬ್ಬಂದಿಗೆ ಮಾಸಿಕ ಮೊಬೈಲ್ ಭತ್ಯೆಯನ್ನು ಘೋಷಿಸಿದ ಬೆನ್ನಲ್ಲೇ ಹರ್ಯಾಣ ಸರ್ಕಾರ ಅವಿವಾಹಿತರಿಗೆ ಬಂಪರ್ ಯೋಜನೆ ಘೋಷಣೆ ಮಾಡಿದೆ. ಜೊತೆಗೆ ವಿಧವೆ ಮತ್ತು ವಿಧುರರಿಗೂ ಪಿಂಚಣಿ ನೀಡುವ ಯೋಜನೆಯನ್ನು ಪ್ರಕಟಿಸಿದ್ದು ವಿಶೇಷವಾಗಿದೆ. ಈ ಎರಡೂ ಯೋಜನೆಯ ಮೂಲಕ ಅವಿವಾಹಿತರಿಗೆ ಮತ್ತು ವಿಧವೆಯರಿಗೆ ಹಣ ಸಹಾಯ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಜೂನ್ 26 ರಂದು ಸಿಎಂ ಖಟ್ಟರ್ ಅವರು ಹರ್ಯಾಣ ಪೊಲೀಸ್ ಸಿಬ್ಬಂದಿಗೆ ಇನ್ಸ್ಪೆಕ್ಟರ್ ಶ್ರೇಣಿಯವರೆಗಿನ ಮಾಸಿಕ ಮೊಬೈಲ್ ಭತ್ಯೆಯನ್ನು ನೀಡುವುದಾಗಿ ಘೋಷಿಸಿದ್ದರು. ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳಿಗೆ 200 ರೂ., ಸಹಾಯಕ ಸಬ್ಇನ್ಸ್ಪೆಕ್ಟರ್ಗಳಿಗೆ 250 ರೂ., ಸಬ್ಇನ್ಸ್ಪೆಕ್ಟರ್ಗಳಿಗೆ 300 ರೂ. ಮತ್ತು ಇನ್ಸ್ಪೆಕ್ಟರ್ ಗಳಿಗೆ 400 ರೂ.ಗಳನ್ನು ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.