ನ್ಯೂಸ್ ನಾಟೌಟ್ : ಕೆರಿಬಿಯನ್ ನಾಡಿನಲ್ಲಿ ಸಾಮ್ರಾಟನಾಗಿ ಮೆರೆಯೋಕೆ ಟೀಂ ಇಂಡಿಯಾ ಸರ್ವಸನ್ನದ್ಧವಾಗಿದೆ. ನಾಳೆಯಿಂದ (ಜು.12) ವಿಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಕೊಹ್ಲಿ ಪಡೆ ಭಾರಿ ನಿರೀಕ್ಷೆ ಮೂಡಿಸಿದೆ. ಡೊಮಿನಿಕಾದಲ್ಲಿ ವೆಸ್ಟ್ ಇಂಡೀಸ್ (India vs West Indies) ತಂಡವನ್ನು ಯಾವ ರೀತಿ ಎದುರಿಸಲಿದೆ ಅನ್ನುವುದು ಈಗ ಎಲ್ಲರ ಕುತೂಹಲವಾಗಿದೆ.
ಸರಣಿಗೆ ಪ್ರವಾಸಿ ಭಾರತ ತಂಡ ಕಠಿಣ ತರಬೇತಿಯನ್ನು ನಡೆಸಿದೆ. ನಾಯಕ ರೋಹಿತ್ ಶರ್ಮ ನೇತೃತ್ವದಲ್ಲಿ ನೆಟ್ನಲ್ಲಿ ಆಟಗಾರರು ಬೆವರಿಳಿಸಿದರು.
ಮೊದಲ ಟೆಸ್ಟ್ಗೂ ಮುನ್ನ ಟೀಮ್ ಇಂಡಿಯಾ (Team India) ವಿಶಿಷ್ಟವಾದ ಒನ್ ಹ್ಯಾಂಡ್ ಕ್ಯಾಚಿಂಗ್ ಡ್ರಿಲ್ನಲ್ಲಿ ತೊಡಗಿಸಿಕೊಂಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ವಿರಾಟ್ ಕೊಹ್ಲಿ (Virat Kohli), ಶುಭ್ಮನ್ ಗಿಲ್, ಇಶಾನ್ ಕಿಶನ್, ಅಜಿಂಕ್ಯ ರಹಾನೆ ಸೇರಿದಂತೆ ಕೆಲವು ಆಟಗಾರರು ನೆಟ್ನಲ್ಲಿ ಅಭ್ಯಾಸ ನಡೆಸಿದರು. ಭಾರತೀಯ ಆಟಗಾರರು ತ್ರಿಕೋನಾಕಾರದ ಫ್ಲೈಯಿಂಗ್ ಡಿಸ್ಕ್ ಎಸೆದು ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಫೀಲ್ಡಿಂಗ್ ಅಭ್ಯಾಸ ನಡೆಸಿದ ದೃಶ್ಯ ರೋಚವಾಗಿತ್ತು.ಈ ಕುರಿತು ಬಿಸಿಸಿಐ(BCCI) ವಿಡಿಯೋವೊಂದನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು, “ಒಂದು ಅತ್ಯುತ್ತಮವಾದ ಫೀಲ್ಡಿಂಗ್ ಡ್ರಿಲ್. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ಗೆ ಮುಂಚಿತವಾಗಿ ಭಾರತ ತಂಡ ತಮ್ಮ ಫೀಲ್ಡಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ” ಎಂದು ಶೀರ್ಷಿಕೆಯನ್ನು ನೀಡಿದೆ.
ಇತ್ತ ಟೀಂ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಈ ಹಿಂದೆ ಕಳಪೆ ಪ್ರದರ್ಶನ ತೋರಿದ್ದ ಮೂವರು ಆಟಗಾರರ ಮೇಲೆ ಸಾಕಷ್ಟು ಒತ್ತಡ ಇರುವುದರಿಂದ ಈ ಮ್ಯಾಚ್ ನ್ನು ಗಂಭೀರವಾಗಿ ಪರಿಗಣಿಸಲೇ ಬೇಕಾಗಿದೆ. ಅತ್ತ ವೆಸ್ಟ್ ಇಂಡೀಸ್ ತಂಡ ಐಸಿಸಿ ವಿಶ್ವಕಪ್ 2023 ಕ್ವಾಲಿಫೈಯರ್ನಲ್ಲಿ ಹೀನಾಯ ಪ್ರದರ್ಶನ ತೋರಿ ಈ ಸರಣಿಗೆ ಬರುತ್ತಿರುವುದರಿಂದ ಆ ತಂಡಕ್ಕೂ ಗೆಲ್ಲುವ ಜವಾಬ್ದಾರಿಯಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಸರಣಿ ಬಹುಮುಖ್ಯವಾಗಿದೆ.
ಇದೀಗ ಈ ಸ್ಥಾನಕ್ಕೆ ಯುವ ಆಟಗಾರ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿ ಅವರನ್ನು ಟೀಮ್ ಇಂಡಿಯಾದಲ್ಲಿ ಬೆಳೆಸಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣಕ್ಕೆ ಅವರನ್ನು ರೋಹಿತ್ ಜತೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಸಿದಂತೆ ತೋರುತ್ತಿದೆ. ಕಳೆದ ಕೆಲವು ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರೋಹಿತ್ ಕೂಡ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಬ್ಯಾಟಿಂಗ್ ಫಾರ್ಮ್ಗೆ ಮರಳಿರುವ ಮುನ್ಸೂಚನೆ ನೀಡಿದ್ದಾರೆ.ಒಟ್ಟಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಕುತೂಹಲವನ್ನುಂಟು ಮಾಡಿದೆ.