ನ್ಯೂಸ್ ನಾಟೌಟ್: ಭಾರತತೀಯ ಸಂಸ್ಕೃತಿ ಆಚರಣೆಗಳೇ ಹಾಗೆ, ಅವುಗಳು ಆಚರಣೆಯ ಶೈಲಿಗಿಂತ ಅದರ ವಿಭಿನ್ನತೆ ಮತ್ತು ವಿಚಿತ್ರ ರೂಢಿ, ಸಂಪ್ರದಾಯಗಳಿಗೆಯೇ ಹೆಸರುವಾಸಿ. ಹಾಗೆಯೇ, ಕೆಲವೆಡೆ ಅನುಸರಿಸುವ ಸಂಪ್ರದಾಯಗಳು ತಿಳಿದರೆ ಅಚ್ಚರಿ ಉಂಟಾಗುತ್ತದೆ. ಬಿಹಾರದಲ್ಲಿ ಇಂತಹದ್ದೇ ವಿಭಿನ್ನ ಜಾತ್ರೆಯೊಂದು ಸುದ್ದಿಯಾಗುತ್ತಿದೆ.
ವಿಷದ ಹಾವುಗಳಿಗೆ ಹೆಚ್ಚಿನ ಎಲ್ಲರೂ ಭಯಪಡುತ್ತಾರೆ. ಆದರೆ ಬಿಹಾರದ ಸಮಷ್ಟಿಪುರ ದೇವಾಲಯದ ಜಾತ್ರೆಯಲ್ಲಿ ವಿಷಪೂರಿತ ಹಾವುಗಳನ್ನು ಯಾವುದೇ ಭಯವಿಲ್ಲದೇ ಯುವಕರು ಕೊರಳಲ್ಲಿ ಧರಿಸುತ್ತಾರೆ. ಹಾವುಗಳನ್ನು ಕೊರಳಲ್ಲಿ ಸುತ್ತಿಕೊಂಡು ಗಂಡಕಿ ನದಿಯಲ್ಲಿ ಸ್ನಾನ ಮಾಡುವುದೇ ಇಲ್ಲಿನ ಆಚರಣೆ.
ವಿಷಕಾರಿ ಹಾವುಗಳನ್ನು ಭಕ್ತರು ಕೈ ಮತ್ತು ಕುತ್ತಿಗೆಗೆ ಸುತ್ತಿಕೊಳ್ಳುವ ಈ ಜಾತ್ರೆಗೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಶ್ರಾವಣ ಮಾಸದ ನಾಗರ ಪಂಚಮಿಯ ದಿನದಂದು ವಿಭೂತಿಪುರ ಸಿಂಘಿಯಾ ಘಾಟ್ನಲ್ಲಿ ಹಲವಾರು ವರ್ಷಗಳಿಂದ ಈ ಜಾತ್ರೆ ನಡೆಯುತ್ತಿದೆ ಎಂದು ವರದಿಯಾಗಿದೆ.
ನಾಗರ ಪಂಚಮಿಯಂದು ಹಗಲು ರಾತ್ರಿ ಈ ವಿಶಿಷ್ಟ ಉತ್ಸವ ನಡೆಯುತ್ತದೆ. ಅಂದು ಇಲ್ಲಿ ಲಕ್ಷಾಂತರ ಭಕ್ತರು ನೆರೆದು ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಭಗತ್ ರಾಮ್ ಸಿಂಗ್ ಎಂಬ ಭಕ್ತರೊಬ್ಬರು ಬಹಳ ಹಿಂದೆ ವಿಶಹರಿ ಎಂಬ ದೇವಿಯ ಆರಾಧಕರು ಎನ್ನಲಾಗಿದೆ, ನೂರಾರು ಹಾವುಗಳನ್ನು ಇಲ್ಲಿನ ಗುಹೆಗಳಿಂದ ಹೊರತೆಗೆದಿದ್ದರಂತೆ. ಮುಂದೆ ಇದೇ ಘಟನೆ ಜಾತ್ರೆಯಾಗಿ ಬದಲಾಯಿತು ಎನ್ನಲಾಗುತ್ತದೆ.