ಸೌಜನ್ಯ ಸಾವಿನ ನ್ಯಾಯಕ್ಕಾಗಿ ಸುಳ್ಯದಲ್ಲೂ ಜನರಿಂದ ಒತ್ತಾಯ ಹೆಚ್ಚಾಗಿದ್ದು, ಅದರ ಸಲುವಾಗಿ ಗುತ್ತಿಗಾರು, ಕೊಲ್ಲಮೊಗ್ರು ಪೇಟೆ ಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೋರಾಟವನ್ನು ಬೆಂಬಲಿಸಿ ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಸಲಾಗಿದೆ. ಗುತ್ತಿಗಾರು, ಕೊಲ್ಲಮೊಗ್ರದಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ತಾಲೂಕಿನಲ್ಲಿಯೂ ಹೋರಾಟಕ್ಕೆ ಸಂಘಟನೆಗಳಿಂದ ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ತಾಲೂಕಿನ ಗುತ್ತಿಗಾರು ಮತ್ತು ಕೊಲ್ಲಮೊಗ್ರು ಎಂಬಲ್ಲಿ ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಅಟೋ ಹಾಗು ಜೀಪ್ ಮತ್ತು ಪಿಕಪ್ ಚಾಲಕರು ಮತ್ತು ಮಾಲಕರು ಬ್ಯಾನರ್ ಅಳವಡಿಕೆ ಮಾಡಿದ್ದು ಭಾರಿ ಸುದ್ದಿಯಾಗುತ್ತಿದೆ.
ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಹೆಣ್ಣಲ್ಲವೇ, ಹಳ್ಳಿಗೊಂದು ನ್ಯಾಯ – ಡೆಲ್ಲಿಗೊಂದು ನ್ಯಾಯ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ, ಮಹೇಶ್ ತಿಮ್ಮರೋಡಿಯವರ ನ್ಯಾಯಯುತ ಹೋರಾಟ ಬೆಂಬಲಿಸೋಣ ಎಂಬ ಬರಹಗಳನ್ನು ಬ್ಯಾನರ್ ನಲ್ಲಿ ಬರೆಯಲಾಗಿದೆ.
ಇದರ ಜೊತೆಗೆ ಸಾವಿರಾರು ಮಂದಿಯನ್ನು ಒಳಗೊಂಡ ವಾಟ್ಸಪ್ ಗ್ರೂಪ್ ಗಳು ಹೋರಾಟಕ್ಕಾಗಿ ಸಿದ್ಧಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ ಎನ್ನಲಾಗಿದೆ.