ನ್ಯೂಸ್ ನಾಟೌಟ್ : ಸಯಾಮಿ ಅವಳಿಗಳು ಅಥವಾ ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಹುಟ್ಟುವ ಅವಳಿ ಜೀವಗಳಾಗಿವೆ.ಇದೀಗ ಅಂಟಿಕೊಂಡೇ ಹುಟ್ಟಿದ ಅವಳಿ ಮಕ್ಕಳನ್ನು ಶಸ್ತ್ರಚಿಕಿತ್ಸೆ ಮೂಲಕ ದೆಹಲಿ ಏಮ್ಸ್ ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದು ಹೆಮ್ಮೆಯ ವಿಷಯವಾಗಿದೆ.
ಈ ಹಿಂದೆಯೂ 2017ರಲ್ಲಿ ಇಂತಹ ಅತ್ಯಂತ ಸುದೀರ್ಘವಾದ ಶಸ್ತ್ರಚಿಕಿತ್ಸೆಯನ್ನು ಹೊಸದಿಲ್ಲಿಯ ಏಮ್ಸ್ನ 20 ತಜ್ಞ ವೈದ್ಯರ ತಂಡ ನಡೆಸಿತು.ಜಪಾನ್ನಿಂದ ಆಗಮಿಸಿದ್ದ ಸ್ಪೆಷಲಿಸ್ಟ್ ಮಾರ್ಗದರ್ಶನದಲ್ಲಿ ಸುಮಾರು 24 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.ಇಬ್ಬರ ಮೆದುಳನ್ನು ತಾತ್ಕಾಲಿಕವಾಗಿ ಬೇರ್ಪಡಿಸಿದ್ದ ಸುದ್ದಿ ಭಾರಿ ವೈರಲ್ ಆಗಿತ್ತು.
ಇದೀಗ ಇಂತಹ ಮತ್ತೊಂದು ಘಟನೆ ವರದಿಯಾಗಿದೆ.ಇಲ್ಲಿ ಇಬ್ಬರು ಹೆಣ್ಣುಮಕ್ಕಳು ಒಂದೇ ದೇಹವಾಗಿ ಜನಿಸಿದ್ದು,ಅವರ ಹೊಟ್ಟೆ ಹಾಗೂ ಎದೆಯ ಭಾಗವು ಒಂದೇ ದೇಹವಾಗಿ ರೂಪುಗೊಂಡಿತ್ತು.ಇದು ಪೋಷಕರ ಆತಂಕಕ್ಕೂ ಎಡೆ ಮಾಡಿಕೊಟ್ಟಿತ್ತು. ಆದರೂ ವೈದ್ಯರ ಮೇಲೆ ಭಾರ ಹಾಕುತ್ತಾ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಏಮ್ಸ್ ವೈದ್ಯರು ಪೋಷಕರ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಎರಡೂ ಮಕ್ಕಳ ದೇಹಗಳನ್ನು ಬೇರ್ಪಡಿಸಿ ಅಚ್ಚರಿಗೆ ಕಾರಣರಾಗಿದ್ದಾರೆ.ವೈದ್ಯ ಲೋಕವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಈ ವೈದ್ಯರ ಸಾಹಸ.ಇದೀಗ ಮುದ್ದಾದ ಮಕ್ಕಳ ಫೋಟೊ ವೈರಲ್ (Viral News) ಆಗಿದ್ದು,ಕಡೆಗೂ ತಂದೆ-ತಾಯಿ ಈಗ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಹೆಣ್ಣು ಮಕ್ಕಳ ಹೆಸರು “ರಿದ್ಧಿ ಹಾಗೂ ಸಿದ್ಧಿ. ಇಬ್ಬರು ಹೆಣ್ಣುಮಕ್ಕಳೀಗ ಆರೋಗ್ಯವಾಗಿದ್ದು, ಆಟವಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ರಾಯ್ಬರೇಲಿ ನಿವಾಸಿ ದೀಪಿಕಾ ಗುಪ್ತಾ ಎಂಬುವವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಎರಡೂ ಮಕ್ಕಳಿಗೆ ಸಮಸ್ಯೆಯಾಗಿತ್ತು.ಹೀಗಾಗಿ ಅವರು ಅಂಟಿಕೊಂಡೇ ಜನಿಸಿದ್ದಾರೆ.ಬಳಿಕ ನುರಿತ ವೈದ್ಯರನ್ನು ಭೇಟಿಯಾದಾಗ ಶಸ್ತ್ರ ಚಿಕಿತ್ಸೆ ಮೂಲಕ ಬೇರ್ಪಡಿಸುವ ಬಗ್ಗೆ ಅವರು ಅಭಿಪ್ರಾಯ ತಿಳಿಸಿದ್ದಾರೆ.ಆ ಬಳಿಕ ಅವರು ದೆಹಲಿ ವೈದ್ಯರನ್ನು ಭೇಟಿಯಾಗಿದ್ದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಎರಡೂ ಮಕ್ಕಳನ್ನು ಬೇರ್ಪಡಿಸಲಾಗಿದೆ” ಎಂದು ಏಮ್ಸ್ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಿನು ಬಾಜಪೇಯಿ ತಿಳಿಸಿದ್ದಾರೆ.
2022ರ ಜುಲೈ 7ರಂದು ಅಂದ್ರೆ ಸರಿಸುಮಾರು ಒಂದು ವರ್ಷದ ಹಿಂದೆ ಎರಡೂ ಮಕ್ಕಳು ಜನಿಸಿವೆ.ಆರೋಗ್ಯದ ಸಮಸ್ಯೆಯಿಂದ ಎರಡೂ ಮಕ್ಕಳು ಐದು ತಿಂಗಳು ಐಸಿಯುನಲ್ಲೇ ಇದ್ದವು ಎಂದು ಹೇಳಲಾಗಿದೆ. ಅವರಿಗೆ 11 ತಿಂಗಳು ತುಂಬಿದಾಗ ( ಕಳೆದ ಜೂನ್ 7ರಂದು) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ನಂತರ ಅವರು ಚೇತರಿಸಿಕೊಂಡಿದ್ದು ಅವಳಿ ಮಕ್ಕಳ ಮೊದಲ ಜನ್ಮದಿನಾಚರಣೆಯನ್ನು ಆಸ್ಪತ್ರೆಯಲ್ಲಿಯೇ ಆಚರಿಸಲಾಗಿದೆ ಎಂದು ಮಕ್ಕಳ ಪೋಷಕರು ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು 9 ಗಂಟೆ ತೆಗೆದುಕೊಂಡಿದ್ದು,ಏಮ್ಸ್ನ ತಾಯಿ ಮತ್ತು ಮಕ್ಕಳ ಘಟಕದಲ್ಲಿ ಮಕ್ಕಳಿಗೆ ಸಾಮಾನ್ಯ ಅನಸ್ತೇಷಿಯಾ ನೀಡಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.ಸಾಮಾನ್ಯ ಆಸ್ಪತ್ರೆಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡಲು ಅಸಾಧ್ಯ.ಇದಕ್ಕೆ ನುರಿತ ವೈದ್ಯರ ತಂಡ ಬೇಕಾಗುತ್ತೆ.ಅದಕ್ಕೆ ಪೂರಕವಾದ ಅತ್ಯಾಧುನಿಕ ಸಲಕರಣೆಗಳು ಕೂಡ ಬೇಕಾಗುತ್ತದೆ. ಆದರೆ, ಏಮ್ಸ್ ವೈದ್ಯರು ಇಂತಹ ಸಾಧನೆ ಮಾಡಿದ್ದಾರಂದ್ರೆ ನಿಜಕ್ಕೂ ಆಸ್ಚರ್ಯವಾಗುತ್ತೆ. ಮಕ್ಕಳು ಈಗ ಎಲ್ಲಾ ಮಕ್ಕಳಂತೆ ಆರಾಮವಾಗಿದ್ದು ಅತ್ತಿಂದಿತ್ತ ಓಡಾಡುತ್ತಿದ್ದಾರೆ ಎಂಬುದಾಗಿ ಬಾಜಪೇಯಿ ತಿಳಿಸಿದ್ದಾರೆ.
ಮಕ್ಕಳು ಜನಿಸಿದಾಗ ಆತಂಕಕ್ಕೊಳಗಾಗಿದ್ದ ಪೋಷಕರು ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಆತಂಕ ಇನ್ನಷ್ಟು ಹೆಚ್ಚಾಯಿತಂತೆ.ಆದರೆ, ವೈದ್ಯರು ಹಾಗೂ ದೇವರ ಕೃಪೆಯಿಂದಾಗಿ ನನ್ನ ಮಕ್ಕಳು ಆರೋಗ್ಯದಿಂದ ಇದ್ದಾರೆ” ಎಂದು ದೀಪಿಕಾ ಗುಪ್ತಾ ತಿಳಿಸಿದ್ದಾರೆ.