ನ್ಯೂಸ್ ನಾಟೌಟ್ : ಸ್ಮಾರ್ಟ್ಫೋನ್ ಮೂಲಕ ಕರೆ ಹಾಗೂ ಮೆಸೆಜ್ ಅನ್ನು ಹೊರತುಪಡಿಸಿ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು, ಆನ್ಲೈನ್ ಶಾಫಿಂಗ್ ಮಾಡಬಹುದು ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ಪಡೆದುಕೊಳ್ಳಬಹುದು. ಈಗ ಸೊಳ್ಳೆಗಳನ್ನೂ ಸಹ ಓಡಿಸಬಹುದು.
ಹೌದು, ಮಳೆಗಾಲ ಆರಂಭ ಆಗಿರುವುದರಿಂದ ಸೊಳ್ಳೆಗಳ ಸಂಖ್ಯೆ ಸಹ ಹೆಚ್ಚಾಗಿದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ಸಾಮಾನ್ಯವಾಗಿ ಮನೆಯಲ್ಲಿ ವಿವಿಧ ರೀತಿಯ ಉಪಕರಣಗಳನ್ನು ಅಥವಾ ಸೊಳ್ಳೆ ಬ್ಯಾಟ್ ಬಳಕೆ ಮಾಡುತ್ತಿರಬಹುದು. ಈ ನಡುವೆ ಫೋನ್ ಮೂಲಕವೇ ಸೊಳ್ಳೆಗಳನ್ನು ಓಡಿಸಬಹುದು ಎಂಬುದು ವಿಶೇಷ.
ಸ್ಮಾರ್ಟ್ಫೋನ್ ಹೊಂದಿರುವ ಯಾರೇ ಆದರೂ ಹಲವಾರು ಆಪ್ಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಈ ಸೊಳ್ಳೆ ವಿರುದ್ಧ ಹೋರಾಡಲು ಅಥವಾ ಸೊಳ್ಳೆಗಳು ನಿಮ್ಮ ಹತ್ತಿರಕ್ಕೆ ಬರದಂತೆ ಮಾಡಲು ಆಪ್ಗಳನ್ನು ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.
ಈ ಆಪ್ಗಳು ಆಪ್ ಸ್ಟೋರ್ನಲ್ಲಿ ಉಚಿತವಾಗಿ ಲಭ್ಯ ಇದ್ದು, ಇವುಗಳನ್ನು ಸಕ್ರಿಯವಾಗಿ ಬಳಕೆ ಮಾಡುವ ಮೂಲಕ ಸ್ವಲ್ಪ ಮಟ್ಟದಲ್ಲಾದರೂ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರುತ್ತವೆ. ಈ ಸಂಬಂಧ ಪ್ಲೇ ಸ್ಟೋರ್ನಲ್ಲಿ ಹಲವಾರು ಆಪ್ಗಳು ಲಭ್ಯವಿದ್ದು, ಅದರಲ್ಲಿ ಪ್ರಮುಖವಾಗಿ ಮಸ್ಕಿಟೋಸ್ ಕಿಲ್ಲರ್, ಮಸ್ಕಿಟೋಸ್ ವಾಯ್ಸ್, ಫ್ರೀಕ್ವೆನ್ಸಿ ಜನರೇಟರ್ ಸೇರಿದಂತೆ ಮುಂದಾದ ಆಪ್ ಗಳು ಹೆಚ್ಚು ಬಳಕೆ ಆಗುತ್ತಿವೆ. ಈ ಆ್ಯಪ್ಗ ಳನ್ನು ಇನ್ಸ್ಟಾಲ್ ಮಾಡುವಾಗ ಒಮ್ಮೆ ವಿಮರ್ಶೆ ಹಾಗೂ ರೇಟಿಂಗ್ ನೋಡಿ ಇನ್ಸ್ಟಾಲ್ ಮಾಡಿಕೊಳ್ಳಿ ಎನ್ನುವುದು ನಮ್ಮ ಅಭಿಪ್ರಾಯ.
ಸಾಮಾನ್ಯವಾಗಿ ಪ್ರತಿ ಪ್ರಾಣಿ ಹಾಗೂ ಪಕ್ಷಿಗಳು ಕೆಲವು ಶಬ್ದಕ್ಕೆ ಹೆದರುವುದುಂಟು. ಇದರ ಆಧಾರದಲ್ಲಿಯೇ ಈ ಆಪ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಇವು ವಿಭಿನ್ನ ಫ್ರೀಕ್ವೆನ್ಸಿ ಶಬ್ದಗಳನ್ನು ಉತ್ಪಾದಿಸುತ್ತವೆ. ಈ ಸೌಂಡ್ ಸೊಳ್ಳೆಗಳನ್ನು ಇನ್ನಿಲ್ಲದಂತೆ ಕಾಡಲಿದ್ದು, ಈ ಶಬ್ದದಿಂದ ದೂರ ಹೋಗಲು ಮುಂದಾಗುತ್ತವೆ ಎನ್ನಲಾಗಿದೆ. ಜೊತೆಗೆ ಈ ಸೌಂಡ್ ಕಡಿಮೆ ಇರುವುದರಿಂದ ಮನುಷ್ಯರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಈ ಆಪ್ಗಳು ಖಂಡಿತಾ ನೂರಕ್ಕೆ ನೂರರಷ್ಟು ಕೆಲಸ ಪರಿಣಾಮ ಬೀರುವುದಿಲ್ಲ. ಬದಲಾಗಿ ಸ್ವಲ್ಪ ಮಟ್ಟಿನ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.