ನ್ಯೂಸ್ ನಾಟೌಟ್: ಔರಂಗಜೇಬ್, ಟಿಪ್ಪು ಸುಲ್ತಾನ ವಿಷಯಕ್ಕೆ ಗಲಾಟೆ ನಡೆದಿದ್ದ ಮಹಾರಾಷ್ಟ್ರದಲ್ಲೀಗ ವಂದೇ ಮಾತರಂ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಶುರುವಾಗಿದೆ. ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ , “ವಂದೇ ಮಾತರಂ” ಎಂಬ ಘೋಷಣೆ ಕೂಗುವುದಿಲ್ಲ ಎಂದು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಿದ್ದು, ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ನನ್ನು ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾ ಪ್ರಕರಣ ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗಿವೆ. ಅಫ್ತಾಬ್ ಪೂನಾವಾಲಾ ಮಾಡಿರುವುದು ತಪ್ಪೇ. ಆದರೆ, ಇಡೀ ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು, ಮುಸ್ಲಿಮರನ್ನು ಕಟಕಟೆಗೆ ತಂದು ನಿಲ್ಲಿಸುವುದು ತಪ್ಪು” ಎಂದು ಹೇಳಿದ್ದಾರೆ.
ವಂದೇ ಮಾತರಂ ವಿಷಯಕ್ಕೆ ಸಂಬಂಧಿಸಿದಂತೆ, ಸಂಭಾಜಿ ನಗರದಲ್ಲಿ ಗಲಾಟೆ ನಡೆದಿರುವ ಕುರಿತು ಮಾತನಾಡಿದ ಅಜ್ಮಿ, “ಭಾರತದಲ್ಲಿ ವಾಸಿಸಬೇಕು ಎಂದರೆ ವಂದೇ ಮಾತರಂ ಘೋಷಣೆ ಕೂಗಲೇಬೇಕು ಎಂದು ಹೇಳುತ್ತಾರೆ. ಆದರೆ, ನಾನು ವಂದೇ ಮಾತರಂ ಎಂಬ ಘೋಷಣೆ ಕೂಗಲು ಆಗುವುದಿಲ್ಲ. ವಂದೇ ಮಾತರಂ ಕೂಗಲು ನಮ್ಮ ಧರ್ಮ ಅನುವು ಮಾಡಿಕೊಡುವುದಿಲ್ಲ. ನಾವು ಅಲ್ಲಾನಲ್ಲಿ ಮಾತ್ರ ನಂಬಿಕೆ ಇಟ್ಟವರು” ಎಂದು ಹೇಳಿದ್ದಾರೆ. ಇದರಿಂದ ದೇಶಾಭಿಮಾನವಿಲ್ಲ ಎಂದಾಯ್ತು, ದೇಶ ದ್ರೋಹಿ ಎಂದೆಲ್ಲ ವಿಪಕ್ಷಗಳು ಆರೋಪಿಸಿವೆ.