ನ್ಯೂಸ್ ನಾಟೌಟ್: ಕೆಲವು ಮದುವೆಗಳು ಚಿತ್ರ-ವಿಚಿತ್ರ ಘಟನೆಗಳಿಂದ ಸುದ್ದಿಯಾಗುತ್ತವೆ. ವಿಜೃಂಭಣೆಯಿಂದ ಮದುವೆ ಸಮಾರಂಭ ನೆರವೇರಿದರು ಆರತಕ್ಷತೆ ಕಾರ್ಯಕ್ರಮದ ವೇಳೆ ವಿಚಿತ್ರ ಪ್ರಸಂಗ ನಡೆದು ಮದುವೆ ಮುರಿದುಬಿದ್ದಿದೆ.
ಆರಕ್ಷತೆ ವೇಳೆ ವಧುವಿನ ಮಲತಂದೆ ವರನಿಗೆ 3 ವಿಚಿತ್ರ ಕಂಡೀಷನ್ ಹಾಕಿದ್ದಾನೆ. ಈ ಷರತ್ತು ಕೇಳಿದ ವರ ಆರತಕ್ಷತೆಯ ವೇದಿಕೆಯಿಂದಲೇ ‘ನಿನ್ನ ಮಗಳೇ ನನಗೆ ಬೇಡ. ನನಗೆ ಈ ಮದುವೆಯ ಅಗತ್ಯವೇ ಇಲ್ಲವೆಂದು ಹೇಳಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ವಿಚಿತ್ರ ಘಟನೆ ನಡೆದದ್ದು ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯಲ್ಲಿ ಎಂದು ವರದಿ ತಿಳಿಸಿದೆ.
ನಾಪತ್ತೆಯಾದ ವರನ ವಿರುದ್ಧ ವಧುವಿನ ಮಲತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬರುಸಾಗರದ ಯುವಕ ಮನ್ವೀಂದ್ರ ಜ್ಯೋತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಜೂನ್ 6ರಂದು ಮನ್ವಿಂದ್ರ ಮತ್ತು ಜ್ಯೋತಿಯವರ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ವಧು-ವರರಿಬ್ಬರ ಬಂಧುಗಳು ಮದುವೆ ಮೆರವಣಿಗೆಯಲ್ಲಿ ಖುಷಿಯಿಂದಲೇ ಇದ್ದರು.
ವಧುವನ್ನು ವರನ ಮನೆಗೆ ಕಳಿಸಿಕೊಳ್ಳುವ ಕಾರ್ಯಕ್ರಮ ನೆರವೇರಿತ್ತು. ಬಳಿಕ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಮರುದಿನ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಆರತಕ್ಷತೆ ಮುಗಿಯುವ ವೇಳೆ ವಧುವಿನ ಮಲತಂದೆ ತಮ್ಮ ವಿಚಿತ್ರ ಕಂಡೀಷನ್ಗಳ ಮೂಲಕ ಎಲ್ಲರಿಗೂ ಆಘಾತ ನೀಡಿದ್ದಾರೆ.
ವಧುವಿನ ಮಲತಂದೆ ವರನಿಗೆ ಹಾಕಿದ ಮೊದಲನೆಯ ಷರತ್ತು ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೂ ಯಾವುದೇ ಕಾರಣಕ್ಕೂ ಸೆ* ಕ್ಸ್ ಮಾಡುವಂತಿಲ್ಲವೆಂಬುದು. 2ನೇಯದು ಮದುವೆಯ ಬಳಿಕ ಹುಡುಗಿಯ ತಂಗಿ ಸಹ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ ಅನ್ನೋದು, ಇನ್ನೂ 3ನೇಯದಾಗಿ ಮಗಳ ಮನೆಗೆ ತಾನು ಯಾವಾಗ ಬೇಕಾದರೂ ಬರಬಹುದು. ಆದರೆ ಇದನ್ನು ಮನೆಯಲ್ಲಿದ್ದವರು ಯಾರೂ ಪ್ರಶ್ನೆ ಮಾಡುವಂತಿಲ್ಲವೆಂದು ಹೇಳಿದ್ದಾರೆ.