ನ್ಯೂಸ್ ನಾಟೌಟ್ : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸಿದ ಪ್ರಕರಣವು ಇಡೀ (Manipur Video) ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಈ ಪ್ರಕರಣವನ್ನು ದೇಶಾದ್ಯಂತ ಜನ ಖಂಡಿಸಿದ್ದಾರೆ. ಇನ್ನು, ದೌರ್ಜನ್ಯಕ್ಕೀಡಾದ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ಪತಿ ಮಾಜಿ ಸೈನಿಕ ಎಂದು ತಿಳಿದುಬಂದಿದೆ.
ಅವರು ಈ ಸಂಬಂಧಪಟ್ಟ ಹಾಗೆ ಮಾತನಾಡಿದ್ದು,“ಕಾರ್ಗಿಲ್ನಲ್ಲಿ ದೇಶವನ್ನು ರಕ್ಷಣೆ ಮಾಡಿದ ನಾನು, ನನ್ನ ಹೆಂಡತಿಯನ್ನೇ ರಕ್ಷಿಸಲು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ನಾನೊಬ್ಬ ಸೈನಿಕ ,ದೇಶಕ್ಕಾಗಿ ಹೋರಾಡಿದೆ. ಕಾರ್ಗಿಲ್ ಯುದ್ಧದಲ್ಲಿಯೂ ಪಾಲ್ಗೊಂಡಿದ್ದೆ.ನಾನು ನನ್ನ ದೇಶವನ್ನು ರಕ್ಷಣೆ ಮಾಡಿದೆ. ಆದರೆ,ನನ್ನ ಪತ್ನಿಯನ್ನು ರಕ್ಷಿಸಲಾಗಲಿಲ್ಲ ಎಂದು ಕಣ್ಣೀರಾದರು.
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. “ಮೋದಿ ಸರ್ಕಾರ ಯೋಧರ ಬಗ್ಗೆ ಮಾತನಾಡುತ್ತದೆ. ಆದರೆ, ನಿವೃತ್ತ ಯೋಧನ ಪತ್ನಿಗೆ ರಕ್ಷಣೆ ಇಲ್ಲ” ಎಂದು ಜನ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು, ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿ ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಲಾಗಿತ್ತು. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದು ಈ ಘಟನೆ ನಡೆದಿದ್ದು, ಘಟನೆ ಕುರಿತು ಭಾರಿ ಆಕ್ರೋಶದ ಮಾತುಗಳು ಕೇಳಿ ಬಂದಿವೆ.