ನ್ಯೂಸ್ ನಾಟೌಟ್ : ತಾಯಿ – ಮಗುವಿನ ಬಾಂಧವ್ಯಕ್ಕೆ ಬೆಲೆ ಕಟ್ಟೋದಕ್ಕೆ ಆಗಲ್ಲ. ತಾಯಿ ತನ್ನ ಮಗುವಿಗಾಗಿ ಪ್ರಾಣವನ್ನೂ ಬಿಡುವುದಕ್ಕೆ ಸಿದ್ಧಳಾಗಿರುತ್ತಾಳೆ. ಆದರೆ ಇಲ್ಲೊಬ್ಬಳು ಮಹಿಳೆ ಇದಕ್ಕೆ ತದ್ವಿರುದ್ಧವಾಗಿದ್ದಾಳೆ.ತನ್ನ ಗಂಡ ತೀರಿ ಹೋದ ಬಳಿಕ ಆಕೆ ಮಗನಿಗೆ ಲೈಂಗಿಕ ದೌರ್ಜನ್ಯವೆಸಗಿದ ಭಯಾನಕ ಘಟನೆ ವರದಿಯಾಗಿದೆ.
ಹೌದು, ಅಮೆರಿಕಾದ ಮಹಿಳೆಯೊಬ್ಬಳು ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎನ್ನಲಾಗಿದೆ. ೮ ವರ್ಷಗಳಿಂದ ಈಕೆ ಮಗನನ್ನು ಬಂಧಿಸಿಟ್ಟು ಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ. ಬೆಚ್ಚಿ ಬೀಳಿಸುವ ಸಂಗತಿಯೆಂದರೆ ಆತನ ತಾಯಿಯೇ ತನ್ನ ಕಾಮಾಸಕ್ತಿ ತೀರಿಸಿಕೊಳ್ಳಲು ಈತನನ್ನು ಬಂಧಿಸಿಟ್ಟಿದ್ದಳು ಎಂಬುದು ಬಯಲಾಗಿದೆ.
ಮಗನ ಹೆಸರು ರೂಡಿ ಫರಿಯಾಸ್, 17 ವರ್ಷ ಪ್ರಾಯ. ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿದ್ದ ಹುಡುಗ 8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಂತೆ.ಆತನ ತಾಯಿಯೇ ಈ ಬಗ್ಗೆ ದೂರು ನೀಡಿದ್ದಳು. ಹಲವಾರು ವರ್ಷಗಳ ನಂತರ ರೂಡಿ ಪತ್ತೆಯಾಗಿದ್ದು, ಆತನಿಗೆ ಇದೀಗ 25 ವರ್ಷ ವಯಸ್ಸಾಗಿದೆ. ತನ್ನ ತಾಯಿ ಬಗ್ಗೆ ಮಾತಾನಾಡಿದ ರೂಡಿ ತಾಯಿ ಜೆನ್ನಿ ಸಂತಾನಾ,ಆತನನ್ನು ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ಇಟ್ಟುಕೊಂಡಿದ್ದಳು ಎಂದು ತಿಳಿಸಿದ್ದಾನೆ.ಚರ್ಚ್ನ ಹೊರಗೆ ಪತ್ತೆಯಾಗಿರುವ ರೂಡಿ, ಒಂದು ವಾರದ ನಂತರ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾನೆ.
ಇದೀಗ ರೂಡಿ ಪತ್ತೆಯಾಗಿದ್ದು, ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ಅಪ್ಪ ಮೃತಪಟ್ಟ ಬಳಿಕ ನನ್ನ ಗಂಡನಾಗಿ ಇರು ಎಂದು ಅಮ್ಮ ಒತ್ತಾಯಿಸಿದ್ದಳು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ ಯಾರಿಗೂ ಏನನ್ನೂ ಹೇಳದಂತೆ ಬೆದರಿಕೆ ಕೂಡ ಹಾಕುತ್ತಿದ್ದಳು. ಹೂಸ್ಟನ್ ಪೊಲೀಸರು ಕ್ವಾನೆಲ್ ಎಕ್ಸ್ ಅವರ ಉಪಸ್ಥಿತಿಯಲ್ಲಿ ತಾಯಿ ಜೆನ್ನಿ ಮತ್ತು ರೂಡಿಯನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿದರು. ನಂತರ ಘಟನೆಯ ಸತ್ಯಾಸತ್ಯತೆ ತಿಳಿದು ಪೊಲೀಸರು ತಾಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.