ನ್ಯೂಸ್ ನಾಟೌಟ್: ಜೀವನದಲ್ಲಿ ಚಟಗಳು ಏನೆಲ್ಲ ಮಾಡಿಸಿ ಬಿಡುತ್ತವೆ. ಕೆಲವು ಚಟಗಳು ಚಟ್ಟವನ್ನೇ ಏರಿಸಿ ಬಿಡುತ್ತವೆ. ಅಂತಹುದರಲ್ಲಿ ಇಲ್ಲೊಬ್ಬ ಯುವಕ ತನ್ನ ಚಟಗಳಿಂದಲೇ ಈಗ ಬದುಕಿ ಬಂದು ಸುದ್ದಿಯಾಗಿದ್ದಾನೆ. ಹೌದು, ಇಲ್ಲೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಮೊಬೈಲ್ ಟವರ್ ಏರಿದ್ದಾನೆ. ಯಾರು ಏನೇ ಹೇಳಿದರೂ ಕೇಳುವುದೇ ಇಲ್ಲ. ಕೊನೆಗೆ ರಾಯಲ್ ಚಾಯ್ಸ್ ಮದ್ಯ, ವಿಮಲ್ ಗುಟ್ಕಾ ತಂದು ಈತನಿಗೆ ತೋರಿಸಿದ್ದೇ ತಡ. ಟವರ್ನ ತುದಿಯಲ್ಲಿ ಇದ್ದ ಯುವಕ ಸರಸರನೆ ಕೆಳಕ್ಕಿಳಿದು ಬಂದು ಮಧ್ಯ ಸೇವಿಸಿ, ಗುಟ್ಕಾ ತಿಂದು ಸಂಭ್ರಮಿಸಿದ್ದಾನೆ.
ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಯುವಕನೊಬ್ಬ ನಗ್ನವಾಗಿ ಮೊಬೈಲ್ ಟವರ್ ತುದಿಯೇರಿ (Mobile Tower) ಹುಚ್ಚಾಟ ನಡೆಸಿದ್ದ. ಟವರ್ ತುದಿಯಲ್ಲಿ ನಿಂತು ಅತ್ತಿಂದಿತ್ತ ನೇತಾಡುತ್ತಿದ್ದ. ಅವನನ್ನು ಕೆಳಗೆ ಇಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದರು. ಪೊಲೀಸರು, ಗ್ರಾಮಸ್ಥರ ಮಾತಿಗೆ ಕಿವಿಕೊಡದ ಯುವಕ ರಾಯಲ್ ಚಾಯ್ಸ್ ಮದ್ಯ, ವಿಮಲ್ ಗುಟ್ಕಾ ತಂದಿದ್ದೀವಿ ಬಾ ಎಂದ ಕೂಡಲೇ ಸರಸರನೇ ಕೆಳಗಿಳಿದು ಬಂದಿದ್ದಾನೆ.
ತೆಗ್ಗಿಹಳ್ಳಿ ಗ್ರಾಮದ ಸತೀಶ್ ಕಡಣಿ (30) ಎಂಬಾತ ಮೊಬೈಲ್ ಟವರ್ ಏರಿದ್ದ. ಸತೀಶ್ ಕಡಣಿ ಮಾನಸಿಕ ಅಸ್ವಸ್ಥನಾಗಿದ್ದವನು ಟವರ್ ನೋಡಿದ ಕೂಡಲೇ ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿ ಟವರ್ ಹತ್ತಿ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಇದನ್ನೂ ಕಂಡು ಸ್ಥಳೀಯರು ಆತಂಕಗೊಂಡಿದ್ದರು. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿ ವರ್ತನೆ ಮಾಡುತ್ತಿದ್ದವನನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು.
ಮಾನಸಿಕ ಅಸ್ವಸ್ಥನಾಗಿರುವ ಸತೀಶ್ ಖಣಿ ವಿಮಲ್ ಗುಟ್ಕಾ ತಿನ್ನುವ ಚಟ ಹೊಂದಿದ್ದ. ಹೀಗಾಗಿ ಸತೀಶ್ ಸ್ನೇಹಿತ ವಿಮಲ್ ಗುಟ್ಕಾ ಪ್ಯಾಕೆಟ್ಗಳನ್ನು ಕೈನಲ್ಲಿ ಹಿಡಿದು ಟವರ್ ಏರಿದ್ದರು. ಗುಟ್ಕಾ ಪ್ಯಾಕೆಟ್ ನೋಡುತ್ತಿದ್ದಂತೆ ಖುಷಿಯಾಗಿ ಸತೀಶ್ ಟವರ್ ತುದಿಯಿಂದ ಕೆಳಗೆ ಇಳಿದಿದ್ದಾನೆ. ಈ ಹಿಂದೆ ಎರಡು ಬಾರಿ ತೆಗ್ಗಿಹಳ್ಳಿಯಲ್ಲೂ ಟವರ್ ಏರಿ ಕುಳಿತಿದ್ದ ಎನ್ನಲಾಗಿದೆ.