ನ್ಯೂಸ್ ನಾಟೌಟ್: ಹಿಂದೂ ಸಂಪ್ರದಾಯದಲ್ಲಿ ನಂಬಿಕೆಗಳು ಹಲವಾರಿದೆ. ದೇವರ ರೂಪದಲ್ಲಿ ಪ್ರಕೃತಿಯನ್ನ ಆರಾಧಿಸಲಾಗುತ್ತದೆ. ಕಲ್ಲು, ಮರಗಳನ್ನ ಪೂಜೆ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಊರಿನಲ್ಲಿ ಮೈಲಿಗಲ್ಲನ್ನ ಅಂದರೆ ದಾರಿಯಲ್ಲಿ ಕಿ.ಮೀ ತಿಳಿಯಲು ಹಾಕಿರುವ ಮೈಲಿಗಲ್ಲನ್ನು ಪೂಜೆ ಮಾಡಲಾಗುತ್ತದೆ.
ಇದು ತಮಿಳುನಾಡಿನ ಒಂದು ವಿಶೇಷ ಆರಾಧನೆ. ಈ ತಮಿಳುನಾಡಿನ ವಿರುಧುನಗರವನ್ನು ಹಿಂದೆ ವಿರುದುಪಟ್ಟಿ ಎಂದು ಕರೆಯಲಾಗುತ್ತಿತ್ತು, ಇಲ್ಲಿ ಸ್ಥಳೀಯ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಿರುದುನಗರದಲ್ಲಿ ರಾಮನಾಥಪುರಂ ಪುರಾತತ್ವ ಸಂಶೋಧನಾ ಪ್ರತಿಷ್ಠಾನ ನಡೆಸಿದ್ದ ಉತ್ಖನನ ಸಮಯದಲ್ಲಿ ಈ ಪ್ರಾಚೀನ ಮೈಲಿಗಲ್ಲು ಸಿಕ್ಕಿತ್ತು ಎನ್ನಲಾಗಿದೆ.
ವಿರುಧುನಗರಕ್ಕೆ ತೆರಳುವ ಪ್ರಯಾಣಿಕರಿಗೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುವ ಈ ಮೈಲಿಗಲ್ಲು ನಗರದ ಐತಿಹಾಸಿಕ ಘಟನೆಗಳ ಬಗ್ಗೆ ಬಹಳ ಮಹತ್ವದ ವಿಚಾರಗಳನ್ನ ಇದು ತಿಳಿಸುತ್ತದೆ. ಈ ಮೈಲಿಗಲ್ಲು ಬ್ರಿಟಿಷರ ಕಾಲದ್ದಾಗಿದ್ದು, ಸುಮಾರು 150 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ವಿರುಧುನಗರವು ತಮಿಳುನಾಡಿನ ಚೆನ್ನೈನಿಂದ ನೈಋತ್ಯಕ್ಕೆ ಸರಿಸುಮಾರು 506 ಕಿಮೀ ಮತ್ತು ಮಧುರೈನಿಂದ 53 ಕಿಮೀ ದಕ್ಷಿಣದಲ್ಲಿದೆ.
ಈ ಮೈಲಿಗಲ್ಲು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು, ಸ್ಥಳೀಯ ಸಮುದಾಯದಲ್ಲಿ ದೈವಿಕ ಶಕ್ತಿಯಾದ ಮುತ್ತು ಮುನಿಯಸಾಮಿ ಎಂಬ ದೇವರೆಂದು ಪೂಜಿಸಲಾಗುತ್ತದೆ. ವಸಾಹತುಶಾಹಿ ಅವಧಿಯಲ್ಲಿ, ಮೈಲಿಗಲ್ಲುಗಳು ರೋಮನ್, ತಮಿಳು ಮತ್ತು ಅರೇಬಿಕ್ ಅಂಕಿಗಳಲ್ಲಿ ಸೂಚಿಸಲಾದ ಕಿಮೀ ಜೊತೆಗೆ ಇಂಗ್ಲಿಷ್ ಮತ್ತು ತಮಿಳಿನಲ್ಲಿ ಊರಿನ ಹೆಸರುಗಳನ್ನ ಕೆತ್ತಲಾಗಿದೆ.
“ಪ್ರಯಾಣಿಕರು ವಿರುದುಪಟ್ಟಿಯಲ್ಲಿನ ಮೈಲಿಗಲ್ಲಿನ ಬಳಿ ತಪ್ಪದೇ ನಿಂತು ನಮಸ್ಕಾರ ಮಾಡುತ್ತಾರೆ. ಇದನ್ನ ಪ್ರಯಾಣಿಕರ ರಕ್ಷಕ ಎನ್ನಲಾಗುತ್ತದೆ. ಇಲ್ಲಿ ಮುತ್ತು ಮುನಿಯಸಾಮಿಯ ಗೌರವಾರ್ಥವಾಗಿ ಪೂಜೆ ಮಾಡಿ, ತೆಂಗಿನಕಾಯಿಯನ್ನ ಒಡೆಯಲಾಗುತ್ತದೆ ಎಂದು ವರದಿ ತಿಳಿಸಿದೆ.
ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಜಾನಪದ ವಿಭಾಗದ ಮುಖ್ಯಸ್ಥ ಟಿ ಧರ್ಮರಾಜ್ ಪ್ರಕಾರ, ಇಲ್ಲಿನ ಇತಿಹಾಸದ ಪ್ರಕಾರ ಜನರು ನಂಬಿಕೆಯ ದೇವರಾದ ಕರುಪ್ಪು, ಮದನ್ ಮತ್ತು ಮುನಿಗಳನ್ನು ಜನರು ದುರಂತ ಸಾವುಗಳು ನಡೆದ ಸ್ಥಳಗಳಿಗೆ ಸಂಬಂಧ ಕಲ್ಪಿಸಿದ್ದಾರೆ. ಹಾಗಾಗಿ ಅಸಹಜವಾಗಿ ಮರಣ ಹೊಂದಿದವರ ಆತ್ಮಗಳು ಎಂದು ಇವರನ್ನ ಗೌರವಿಸುತ್ತಾರೆ ಎನ್ನಲಾಗಿದೆ. ಹಾಗಾಗಿ ಕೆಟ್ಟ ಘಟನೆ ಆಗದಂತೆ ಹಾಗೂ ಆತ್ಮಗಳನ್ನು ಸಮಾಧಾನಪಡಿಸಲು, ಜನರು ಈ ಕಲ್ಲುಗಳನ್ನ ಪೂಜೆ ಮಾಡುತ್ತಾರೆ ಎನ್ನುವುದು ನಂಬಿಕೆ.