ನ್ಯೂಸ್ ನಾಟೌಟ್ : ಮಡಿಕೇರಿ ಜಿಲ್ಲೆಯ ಕರಿಕೆ ಭಾಗಗಳ ಮೊಬೈಲ್ ನೆಟ್ ವರ್ಕ್, ಸರಕಾರಿ ಬಸ್ ವ್ಯವಸ್ಥೆ ಮತ್ತು ಶಾಲೆಯ ಶಿಕ್ಷಕರ ನೇಮಕ ಸಮಸ್ಯೆಗಳ ಕುರಿತು ಎಳ್ಳುಕೊಚ್ಚಿಯ ಸಹಕಾರ ಸಂಘದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು.
ಈ ವೇಳೆ ಸಭೆಯಲ್ಲಿ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿದರು.”ಕರಿಕೆಯ ಭಾಗಗಳಲ್ಲಿ ಬಹುತೇಕ ಸಮಸ್ಯೆಗಳಿದ್ದು, ಇತ್ತೀಚಿಗೆ ಕರಿಕೆ ಫ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆ ಕೂಡ ಕಂಡು ಬಂದಿದೆ.ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.ಆದಷ್ಟು ಬೇಗ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಕೊಡಗು-ಮೈಸೂರು ಲೋಕಸಭಾಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ “ಈ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಕಂಡುಬಂದಿದೆ, ಅದರಲ್ಲೂ ವಿದ್ಯುತ್ ಸಮಸ್ಯೆಯನ್ನು ಕೂಡ ಈ ಭಾಗದ ಜನರು ಎದುರಿಸುತ್ತಿದ್ದಾರೆ.ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಬಹುತೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ.ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ನೆಟ್ ವರ್ಕ್ ಟವರ್ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಚಂಗಪ್ಪ ಕರಿಕೆ ಮಾತನಾಡಿ “ಇಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಸರಿಯಿಲ್ಲ.ಕಾಂಞಗಾಡ್ – ಪಾಣತ್ತೂರು -ಕರಿಕೆ- ಮಡಿಕೇರಿ – ಸುಳ್ಯ ಭಾಗಗಳಿಗೆ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದಾರೆ .ಸರಕಾರಿ ಬಸ್ ವ್ಯವಸ್ಥೆಯಿಲ್ಲದ ಕಾರಣ ಸರಿಯಾದ ಸಮಯಕ್ಕೆ ತಲುಪಲು ಕಷ್ಟವಾಗಿದೆ. ಆದಷ್ಟು ಬೇಗ ಈ ಎಲ್ಲಾ ಭಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು.
ಈ ವೇಳೆ ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರಾ ಸತೀಶ್ , ಗ್ರಾಮ ಪಂಚಾಯತ್ ಸದಸ್ಯ ನಾರಾಯಣ , ಬೂತ್ ಅಧ್ಯಕ್ಷ ಪಿ.ಎಂ ನಂಜುಂಡ , ಪಿ.ಟಿ ಐಸಾಕ್ , ಬಿ.ಎ ನಾರಾಯಣ , ಕೆ .ಜಿ ರತೀಶ್ , ರಮೇಶ್ ಕರಿಕೆ ಮೊದಲಾದವರು ಉಪಸ್ಥಿತರಿದ್ದರು.